HomeKarnatakaBIG NEWS: ಬಾಡಿಗೆದಾರನಿಂದಲೇ ಮನೆ ಮಾಲೀಕನ ಸ್ಕೂಟರ್ ಕಳುವು: ಆರೋಪಿ ಅರೆಸ್ಟ್

BIG NEWS: ಬಾಡಿಗೆದಾರನಿಂದಲೇ ಮನೆ ಮಾಲೀಕನ ಸ್ಕೂಟರ್ ಕಳುವು: ಆರೋಪಿ ಅರೆಸ್ಟ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಕಳ್ಳತ, ಬಾಡಿಗೆಗೆ ಬಂದವರಿಂದಲೇ ದುಷ್ಕೃತ್ಯದ ಘಟನೆಗಳು ಹೆಚ್ಚುತ್ತಿವೆ. ಇಲ್ಲೋರ್ವ ಮನೆ ಬಾಡಿಗೆಗೆ ಇದ್ದಾತನೇ ಮಾಲೀಕನ ಸ್ಕೂಟರ್ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ಹೊರವಲಯದ ಕುರುಬರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮುಸುಕುಧಾರಿಯೊಬ್ಬ ಮನೆಯ ಕಂಪೌಂಡ್ ಒಳಗೆ ನುಗ್ಗಿ ಮನೆ ಮಾಲೀಕನ ಸ್ಕೂತರ್ ಕದ್ದೊಯ್ದಿದ್ದ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇನ್ಸ್ ಪೆಕ್ಟರ್ ಸಾದಿಕ್ ನೇತೃತ್ವದ ತಂಡ ಆರೋಪಿ ಪತ್ತೆಹಚ್ಚುವಲ್ಲಿ ಯಶ್ವಿಯಾಗಿದ್ದು, ಶಿವಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಹುಲಿಕುಂಟೆ ಗ್ರಾಮದ ನಿವಾಸಿಯಾಗಿರುವ ಶಿವಕುಮಾರ್ ಕೆಲ ದಿನಗಳ ಹಿಂದೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದ. ಹೀಗೆ ಹೋಗುವಾಗ ಮನೆ ಮಲೀಕರು ಮರೆತು ಬೈಕ್ ನಲ್ಲಿ ಬಿಟ್ಟಿದ್ದ ಕೀ ಎತ್ತುಕೊಂಡಿದ್ದ. ಕೆಲ ದಿನಗಳ ಬಳಿಕ ಮನೆ ಮಾಲೀಕರು ಮನೆಯಲ್ಲಿದ್ದಾಗಲೇ ಕಾಂಪೌಂಡ್ ಪ್ರವೇಶಿಸಿ ಅವರ ಬೈಕ್ ಕದ್ದು ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular