HomeKarnatakaಬೈಕ್ ಸವಾರನ ಮೇಲೆ ಕಾಡಾನೆಗಳ ದಾಳಿ: ಬೈಕ್ ಸ್ಥಳದಲ್ಲೇ ಬಿಟ್ಟು ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ!

ಬೈಕ್ ಸವಾರನ ಮೇಲೆ ಕಾಡಾನೆಗಳ ದಾಳಿ: ಬೈಕ್ ಸ್ಥಳದಲ್ಲೇ ಬಿಟ್ಟು ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ!

ಚಾಮರಾಜನಗರ: ಬೈಕ್ ಸವಾರನ ಮೇಲೆ ಕಾಡಾನೆಗಳ ಹಿಂಡು ಏಕಾಏಕಿ ದಾಳಿ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ನಡೆದಿದೆ.

ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಕಾಡಾನೆಗಳು ದಾಳಿ ನಡೆಸಿವೆ. ಬೈಕ್ ನ್ನು ಸ್ಥಳದಲ್ಲೇ ಬಿಟ್ಟು, ಕಾಡಿನತ್ತ ಓಡಿ ಹೋಗಿ ಬಚಾವ್ ಆಗಿದ್ದಾನೆ. ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಜೀವ ಉಳಿಸಿಕೊಂಡಿದ್ದಾನೆ. ಎದೆ ಝಲ್ ಎನಿಸುವ ಈ ದೃಶ್ಯ ಬೈಕ್ ನ ಹಿಂದೆ ಬರುತ್ತಿದ್ದ ವಾಹನದಲ್ಲಿದ್ದವರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಕೆಲ ಕಾಲ ಆನೆಗಳ ಹಿಂಡು ರಸ್ತೆಯಲ್ಲಿಯೇ ಬೀಡು ಬಿಟ್ಟಿದ್ದು, ವಾಹನ ಸವಾರರು ಜೀವ ಭಯದಲ್ಲಿ ಕಾಲ ಕಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular