ಪಾಟ್ನಾ: ಬಿಹಾರ ಅಂದ್ರೆ ಅಲ್ಲಿ ಏನಾದ್ರೂ ಒಂದು ವಿಚಿತ್ರ ನಡೆಯುತ್ತಲೇ ಇರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ದಾನಾಪುರ ಎಂಬಲ್ಲಿ ಎಸ್‌ಬಿಐ ಎಟಿಎಂ ಬೋರ್ಡ್ ಇರುವ ಮಳಿಗೆಯೊಳಗೆ ಈಗ ಸಲೂನ್ ಒಂದು ಸದ್ದು ಮಾಡುತ್ತಿದೆ
ಅಸಲಿ ಕಥೆ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಎಸ್‌ಬಿಐ ಎಟಿಎಂ ಹೊರಗಡೆ ಸಲೂನ್ ನಡೆಸುತ್ತಿರುವ ವಿಡಿಯೋ ಭಾರಿ ಸಂಚಲನ ಮೂಡಿಸಿತ್ತು. ಆದರೆ ಇದರ ಹಿಂದಿನ ಅಸಲಿ ವಿಚಾರ ಇಲ್ಲಿದೆ:
ಹಳೆಯ ಎಟಿಎಂ ಕೇಂದ್ರ: ಈ ಹಿಂದೆ ಈ ಜಾಗದಲ್ಲಿ ನಿಜವಾಗಿಯೂ ಎಸ್‌ಬಿಐ ಎಟಿಎಂ ಕಾರ್ಯನಿರ್ವಹಿಸುತ್ತಿತ್ತು ಮತ್ತು ಜನರು ಹಣ ವಿತ್‌ಡ್ರಾ ಮಾಡಲು ಇಲ್ಲಿಗೆ ಬರುತ್ತಿದ್ದರು.
ಬ್ಯಾಂಕ್‌ನವರು ಎಟಿಎಂ ಯಂತ್ರವನ್ನು ಅಲ್ಲಿಂದ ತೆರವುಗೊಳಿಸಿದ ನಂತರ, ಮಾಲೀಕರು ಆ ಜಾಗವನ್ನು ಸಲೂನ್ ನಡೆಸಲು ಬಾಡಿಗೆಗೆ ನೀಡಿದ್ದಾರೆ.ಸಲೂನ್ ಮಾಲೀಕರು ಎಟಿಎಂನ ಹಳೆಯ ಬೋರ್ಡ್ ಮತ್ತು ವಿನ್ಯಾಸವನ್ನು ಬದಲಿಸದೆ ಹಾಗೆಯೇ ಉಳಿಸಿಕೊಂಡು ತಮ್ಮ ಕಸುಬು ಆರಂಭಿಸಿದ್ದಾರೆ.
ನೆಟ್ಟಿಗರ ಕಾಮೆಂಟ್ಸ್:
ಈ ವಿಡಿಯೋ ಎಕ್ಸ್ (X) ನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಬ್ಯಾಂಕ್‌ನವರು ಆ ಬೋರ್ಡ್ ತೆಗೆಯುವ ಬದಲು ಅದರ ಮೇಲೆ ಸಲೂನ್ ಹೆಸರು ಬರೆಸಿಬಿಡಬಹುದಿತ್ತು, ವೇಸ್ಟ್ ಆಗುತ್ತಿರಲಿಲ್ಲ ಎಂದು ಒಬ್ಬರು ಸಲಹೆ ನೀಡಿದ್ದಾರೆ.ಒಟ್ಟಿನಲ್ಲಿ ಬಿಹಾರದ ಈ ATM ಸಲೂನ್ ಈಗ ಇಂಟರ್ನೆಟ್ ಮಂದಿಗೆ ಭರ್ಜರಿ ಮನರಂಜನೆ ನೀಡುತ್ತಿರೋದಂತೂ ನಿಜ

