HomeIndiaಸಿಕ್ಕಸಿಕ್ಕವರಿಗೆ ಕಚ್ಚಿದ ಬೀದಿ ನಾಯಿ; 70 ಮಂದಿಗೆ ಗಾಯ

ಸಿಕ್ಕಸಿಕ್ಕವರಿಗೆ ಕಚ್ಚಿದ ಬೀದಿ ನಾಯಿ; 70 ಮಂದಿಗೆ ಗಾಯ

ವಿಲಕ್ಷಣ ಪ್ರಕರಣದಲ್ಲಿ ಬೀದಿ ನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಚ್ಚಿದ್ದು, ಇದರ ಪರಿಣಾಮ 70 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಅರ ಪಟ್ಟಣದಲ್ಲಿ ನಡೆದಿದೆ.

ಅರ ಪಟ್ಟಣದ ಶಿವಗಂಜ್, ಶಿಟ್ಲಾಟೋಲಾ, ಮಹದೇವ ರಸ್ತೆ ಹಾಗೂ ಸದರ್ ಆಸ್ಪತ್ರೆ ಪ್ರಾಂತ್ಯದಲ್ಲಿ ಬುಧವಾರದಂದು ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಯಿ ಈ ರೀತಿ ಏಕಾಏಕಿ ದಾಳಿ ಮಾಡಿರುವುದರಿಂದ ಜನ ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದರು. ಇದೀಗ ಸ್ಥಳೀಯಾಡಳಿತ ಈ ನಾಯಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular