HomeIndiaಮದುವೆ ಮೆರವಣಿಗೆ ನೋಡುತ್ತಿದ್ದವರ ಮೇಲೆಯೇ ನುಗ್ಗಿದ ವರನ ಕಾರ್: ಇಬ್ಬರು ಸಾವು

ಮದುವೆ ಮೆರವಣಿಗೆ ನೋಡುತ್ತಿದ್ದವರ ಮೇಲೆಯೇ ನುಗ್ಗಿದ ವರನ ಕಾರ್: ಇಬ್ಬರು ಸಾವು

ಗೋಪಾಲ್‌ಗಂಜ್: ಬಿಹಾರದ ಗೋಪಾಲ್‌ ಗಂಜ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ ವೀಕ್ಷಿಸುತ್ತಿದ್ದಾಗ ವರನ ಕಾರ್ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಜಿಲ್ಲೆಯ ಸಂಬಲ್‌ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲಖಿಂಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಬುಲೆಟ್ ಕುಮಾರ್ ಕುಶ್ವಾಹ ಎಂಬ ಪ್ರತ್ಯಕ್ಷದರ್ಶಿ ಮಾತನಾಡಿ, ನಮ್ಮ ಗ್ರಾಮದ ಸಲೀಂ ಮಿಯಾ ಕುಟುಂಬಕ್ಕೆ ಬಹ್ತ್ವಾ ಗ್ರಾಮದಿಂದ ಮದುವೆ ಮೆರವಣಿಗೆ ಬಂದಿದೆ. ಐದರಿಂದ ಆರು ಮಹಿಳೆಯರು ಮಂಚದ ಮೇಲೆ ಕುಳಿತಿದ್ದರು ಮತ್ತು ವರನ ಕಾರ್ ಅವರ ಮುಂದೆ ನಿಂತಿತ್ತು. ಕಾರ್ ಚಾಲಕ ಕೂಡ ಕುಳಿತಿದ್ದ. ಅವರು ಥಟ್ಟನೆ ವಾಹನವನ್ನು ಸ್ಟಾರ್ಟ್ ಮಾಡಿದಾಗ ಅವರೆಲ್ಲರ ಮೇಲೆ ನುಗ್ಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಮೂವರನ್ನು ಗೋರಖ್‌ಪುರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ರಮಾವತಿ ದೇವಿ (70) ಮತ್ತು ಲಲಿತಾ ದೇವಿ (60) ಎಂದು ಗುರುತಿಸಲಾಗಿದೆ.

ಸಬ್ ಇನ್ಸ್‌ ಪೆಕ್ಟರ್ ಸಂಜಯ್ ರೈ ಮಾತನಾಡಿ, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular