HomeEntertainmentಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕೌಂಟ್ ಡೌನ್; ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಗಾಸಿಪ್...

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕೌಂಟ್ ಡೌನ್; ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಗಾಸಿಪ್ ಗಲ್ಲಿಯಲ್ಲಿ ವೈರಲ್

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಹದಿಮೂರು ಆರಂಭಗೊಳ್ಳಲು ದಿನಗಳು ಹತ್ತಿರವಾಗುತ್ತಿವೆ. ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮವನ್ನು ಮುನ್ನಡೆಸಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಹೊಸ ಸೀಸನ್ ವರ್ಣರಂಜಿತವಾಗಿ ತೆರೆಕಾಣುವ ನಿರೀಕ್ಷೆಯಿದೆ. ಶೋ ಆರಂಭಕ್ಕೂ ಮುನ್ನವೇ ಪ್ರೇಕ್ಷಕರಲ್ಲಿ ಯಾವ ಸೆಲೆಬ್ರಿಟಿಗಳು ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ದುಪ್ಪಟ್ಟಾಗಿದೆ.

ಈ ಬಾರಿಯ ಸೀಸನ್ ನಲ್ಲಿ ನಟಿ ತಪಸ್ವಿನಿ ಪೂಣಚ್ಚ, ನಟ ಭರತ್ ಬೋಪಣ್ಣ, ಸಿದಾ ಮೂಲಿಮಣಿ, ದಿವ್ಯಾ ವಾಗುಂಕರ್, ಅರ್ಚನಾ ಕೊಟ್ಟಿಗೆ, ಸುದರ್ಶನ್ ರಂಗಪ್ರಸಾದ್ ಹಾಗೂ ಸುನೀಲ್ ರಾವ್ ಸೇರಿದಂತೆ ಪ್ರಮುಖ ಕಲಾವಿದರು ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರಿಗೂ ಬಿಗ್ ಬಾಸ್ ಮನೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ಅಗ್ನಿಪರೀಕ್ಷೆ ಹೆಸರಿನ ವಿಶೇಷ ಆಡಿಷನ್ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಪರಿಣಿತ ಕಲಾವಿದರು ಹಾಗೂ ಕಾಮನ್ ಮನ್ ಮಿಶ್ರಣದೊಂದಿಗೆ ಈ ಬಾರಿಯ ಆಟ ಮತ್ತಷ್ಟು ರೋಚಕವಾಗುವ ಎಲ್ಲಾ ಲಕ್ಷಣಗಳಿವೆ.

ಮನೆಗೆ ಕಾಲಿಡುವ ಸ್ಪರ್ಧಿಗಳ ಅಧಿಕೃತ ಪಟ್ಟಿಯನ್ನು ವಾಹಿನಿ ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಪ್ರೀಮಿಯರ್ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದ್ದು, ಕನ್ನಡಿಗರು ಬಿಗ್ ಬಾಸ್ ಹೊಸ ಅಧ್ಯಾಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular