HomeKarnatakaBIGG NEWS : ಗಂಡ ಉದ್ಯೋಗ ಕಳೆದುಕೊಂಡರೂ ಹೆಂಡತಿಗೆ `ಜೀವಾನಾಂಶ' ಕೊಡಬೇಕು : ಹೈಕೋರ್ಟ್ ಮಹತ್ವದ...

BIGG NEWS : ಗಂಡ ಉದ್ಯೋಗ ಕಳೆದುಕೊಂಡರೂ ಹೆಂಡತಿಗೆ `ಜೀವಾನಾಂಶ’ ಕೊಡಬೇಕು : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಗಂಡ ಉದ್ಯೋಗ ಕಳೆದುಕೊಂಡಿದ್ದಾನೆ ಎಂಬ ಕಾರಣದಿಂದ ಹೆಂಡತಿಗೆ ಜೀವನಾಂಶ ಕೊಡುವುದನ್ನು ನಿರಾಕರಿಸುವಂತಿಲ್ಲ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಜೀವನಾಂಶದ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್,  ಪತಿ ಉದ್ಯೋಗ ಕಳೆದುಕೊಂಡರೂ ಪತ್ನಿಗೆ ಜೀವನಾಂಶ ಕೊಡಲೇಬಕು. ದುಡಿಯಲು ಶಕ್ತಿಯಿರುವ ಪತಿ ಜೀವನಾಂಶ ನೀಡಬೇಕಾಗುತ್ತದೆ. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಅದೇಶ ಸರಿಯಾಗಿಯೇ ಇದೆ ಎಂದು ಹೈಕೋರ್ಟ್ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಅದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ಯಮಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿ ಈ ಆದೇಶ ಹೊರಡಿಸಿದೆ.

2020 ರಲ್ಲಿ ಪತಿ ಮತ್ತು ಪತ್ನಿ ಮದುವೆಯಾಗಿದ್ದರು. ಆದರೆ ಭಿನ್ನಾಭಿಪ್ರಾಯದಿಂದಾಗಿ ಬೇರ್ಪಟ್ಟಿದ್ದರು. ಇಬ್ಬರೂ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 24 ರ  ಅನ್ವಯ ಪತ್ನಿ, ಪತಿಯಿಂದ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಪತಿಗೆ ಜೀವಾನಾಂಶ ನೀಡುವಂತೆ ಆದೇಶ ಹೊರಡಿಸಿತ್ತು.

For Latest News Updates, Join Our Whatsapp Community🚩
RELATED ARTICLES

Most Popular