HomeKarnatakaBIGG NEWS : ರಾಜ್ಯದಲ್ಲಿ ಮತ್ತೆ `ಡೆಂಘಿ’ ಅಬ್ಬರ : 2,432 ಪ್ರಕರಣಗಳು ಪತ್ತೆ!

BIGG NEWS : ರಾಜ್ಯದಲ್ಲಿ ಮತ್ತೆ `ಡೆಂಘಿ’ ಅಬ್ಬರ : 2,432 ಪ್ರಕರಣಗಳು ಪತ್ತೆ!

ಬೆಂಗಳೂರು : ರಾಜ್ಯದಲ್ಲಿ ಮಳೆಗಾಲ ಶುರುವಾದ ಬೆನ್ನಲ್ಲೇ ಡೆಂಘಿ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯಾದ್ಯಂತ 2,432 ಡೆಂಘಿ ಪ್ರಕರಣಗಳು ಪತ್ತೆಯಾಗಿರುವುದು ವರದಿಯಾಗಿದೆ.

ರಾಜ್ಯಾದ್ಯಂತ ಜುಲೈ 1 ರಿಂದ ಈವರೆಗೆ 2,432 ಮಂದಿಗೆ ಡೆಂಘಿ ಸೋಂಕು ಪತ್ತೆಯಾಗಿದ್ದು, ಮೈಸೂರಿನಲ್ಲಿ 211,ವಿಜಯಪುರದಲ್ಲಿ 120, ಚಿತ್ರದುರ್ಗ 94,ಶಿವಮೊಗ್ಗ 83, ಧಾರವಾಡ 82,ಕೊಡಗು 70, ಬಳ್ಳಾರಿ 69, ದಾವಣಗೆರೆ 64 ದಕ್ಷಿಣ ಕನ್ನಡದಲ್ಲಿ 63, ಬಾಗಲಕೋಟೆ 63 ಪ್ರಕರಣಗಳು ವರದಿಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೆಂಗ್ಯೂ ಜ್ವರ ಮತ್ತು ಅಪಾಯಕಾರಿ ಸೊಳ್ಳೆಗಳಿಂದ ಪಾರಾಗುವುದು ಹೇಗೆ….?

ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳೋದು ಸೊಳ್ಳೆ ಕಡಿತದಿಂದ. ಡೆಂಗ್ಯೂ ಜ್ವರ ವ್ಯಕ್ತಿಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತದೆ. ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು.

ಕೆಲವೊಂದು ಟಿಪ್ಸ್‌ ಫಾಲೋ ಮಾಡಿದ್ರೆ ಅಪಾಯಕಾರಿ ಸೊಳ್ಳೆ ಕಡಿತವನ್ನು ತಪ್ಪಿಸಿಕೊಳ್ಳಬಹುದು. ಡೆಂಗ್ಯೂವಿನಂತಹ ಮಾರಕ ಕಾಯಿಲೆಗಳಿಂದಲೂ ದೂರವಿರಬಹುದು.

ನೀವು ಡೆಂಗ್ಯೂ ಜ್ವರದಿಂದ ತಪ್ಪಿಸಿಕೊಳ್ಳಲು ಬಯಸಿದರೆ ಮೊದಲು ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಬೇಕು. ಇದಕ್ಕಾಗಿ ಮನೆಯಿಂದ ಹೊರಹೋಗುವಾಗ ಎರಡೂ ಕೈ ಮತ್ತು ಪಾದಗಳನ್ನು ಸಂಪೂರ್ಣ ಮುಚ್ಚಿಕೊಳ್ಳಿ. ನೀವು ತೋಳಿಲ್ಲದ ಬಟ್ಟೆಗಳನ್ನು ಧರಿಸಲು ಬಯಸಿದರೆ, ಸೊಳ್ಳೆ ಕಡಿತವನ್ನು ತಪ್ಪಿಸಲು ಲೋಶನ್‌ಗಳನ್ನು ಸವರಿಕೊಳ್ಳಿ. ಇದಲ್ಲದೇ ಮಲಗುವಾಗ ಸೊಳ್ಳೆ ಪರದೆ ಬಳಸಿ.

ಮಳೆಗಾಲದಲ್ಲಿ ಡೆಂಗ್ಯೂ ಹರಡುವ ಸಾಧ್ಯತೆ ಹೆಚ್ಚು, ಅದಕ್ಕಾಗಿಯೇ ಈ ಅವಧಿಯಲ್ಲಿ ನೀವು ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚುವುದು ಮುಖ್ಯ. ಹೀಗೆ ಮಾಡುವುದರಿಂದ ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಬಹುದು.

ಕೊಳೆ ಇದ್ದಲ್ಲಿ ಸೊಳ್ಳೆಗಳು ಹೆಚ್ಚು ಸಂತಾನೋತ್ಪತ್ತಿ ಮಾಡುತ್ತವೆ. ಮಳೆಯ  ನೀರು ಸಂಗ್ರಹವಾದಾಗ ಅಂತಹ ಸ್ಥಳಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಹಾಗಾಗಿ ಮನೆಯ ಸುತ್ತ ಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಎಲ್ಲೆಂದರಲ್ಲಿ ಕಸ ಶೇಖರಣೆಯಾಗದಂತೆ ಜಾಗೃತೆ ವಹಿಸಿ. ಮನೆಯನ್ನು ಆದಷ್ಟು ಸ್ವಚ್ಛವಾಗಿರಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular