HomeKarnatakaBIGG NEWS : ನವೆಂಬರ್ ನಲ್ಲಿ ಕರ್ನಾಟಕ `ಜಾತಿ ಗಣತಿ’ ವರದಿ ಸಲ್ಲಿಕೆಗೆ ಆಯೋಗ ಸಿದ್ಧತೆ...

BIGG NEWS : ನವೆಂಬರ್ ನಲ್ಲಿ ಕರ್ನಾಟಕ `ಜಾತಿ ಗಣತಿ’ ವರದಿ ಸಲ್ಲಿಕೆಗೆ ಆಯೋಗ ಸಿದ್ಧತೆ : ಜಯಪ್ರಕಾಶ್ ಹೆಗಡೆ ಮಾಹಿತಿ

ಬೆಂಗಳೂರು : ಕರ್ನಾಟಕ ರಾಜ್ಯ ಜಾತಿ ಗಣತಿ ವರದಿ ಸಲ್ಲಿಕೆಗೆ ಆಯೋಗ ಸಿದ್ಧತೆ ನಡೆಸಿದ್ದು, ನವೆಂಬರ್ ನಲ್ಲಿ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಯಪ್ರಕಾಶ್ ಹೆಗಡೆ, ನವೆಂಬರ್ ನಲ್ಲಿ ಜಾತಿ ಗಣತಿ ವರದಿ ಸಲ್ಲಿಕೆಗೆ ಸಿದ್ಧತೆ ನಡೆಸಲಾಗಿದ್ದು, ಯಾವುದೇ ರೀತಿಯ ಪರಿಷ್ಕರಣೆ ಮಾಡದೇ ವರದಿ ಸಲ್ಲಿಸುತ್ತೇವೆ.  ಸರ್ಕಾರ ಜಾತಿ ಗಣತಿ ವರದಿ ಸ್ವೀಕಾರ ಮಾಡಬಹುದು, ಅಥವಾ ಮಾಡದೇ ಇರಬಹುದು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ಸರ್ಕಾರವು ನಮಗೆ ಜಾತಿ ಗಣತಿ ವರದಿ ಸಲ್ಲಿಸಿ ಎಂದು ಹೇಳಿದೆ. ಹಿಂದೆ ಸಂಗ್ರಹಿಸಿದ್ದ ದತ್ತಾಂಶ ವರದಿಯನ್ನು ಸಲ್ಲಿಸುತ್ತೇವೆ. ಯಾವುದೇ ರೀತಿಯಲ್ಲೂ ಪರಿಷ್ಕರಿಸದೇ ಯಾವ ರೀತಿ ಇದೆಯೋ ಅದನ್ನೇ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ..

ಜಾತಿ ಗಣತಿ ವರದಿ ಬಿಡುಗಡೆಗೆ ಸ್ಪಷ್ಟ ದಿನಾಂಕ ನಿಗದಿಪಡಿಸಿ ಕಾಂತರಾಜ್ ಆಯೋಗದ ವರದಿಯನ್ನು  ಸಾರ್ವಜನಿಕವಾಗಿ ಮಂಡಿಸುವಂತೆ ಒತ್ತಾಯಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular