HomeEntertainmentಎರಡೇ ದಿನಕ್ಕೆ 'ಬಿಗ್ ಬಾಸ್' ಮನೆ ಗೋಡೆ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ ಸ್ಪರ್ಧಿ..! ವೀಡಿಯೋ...

ಎರಡೇ ದಿನಕ್ಕೆ ‘ಬಿಗ್ ಬಾಸ್’ ಮನೆ ಗೋಡೆ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ ಸ್ಪರ್ಧಿ..! ವೀಡಿಯೋ ವೈರಲ್ |WATCH VIDEO

ಬಿಗ್ ಬಾಸ್ ಹೊಸ ಸೀಸನ್ ಭರ್ಜರಿಯಾಗಿ ಆರಂಭವಾಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಯಾಲಿಟಿ ಶೋ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 10 ಆರಂಭವಾಗಿದ್ದರೆ, ತಮಿಳಿನಲ್ಲೂ ಸೀಸನ್ 10ಕ್ಕೆ ಅದ್ಧೂರಿ ಚಾಲನೆ ದೊರೆತಿದೆ.

ತಮಿಳು ಬಿಗ್ ಬಾಸ್ ಸೀಸನ್ 10 ಅನ್ನು ನಟ ವಿಜಯ್ ಸೇತುಪತಿ ನಿರೂಪಿಸುತ್ತಿದ್ದಾರೆ. ಸೆಪ್ಟೆಂಬರ್ 6, 2026ರಂದು ಆರಂಭವಾದ ಈ ಸೀಸನ್‌ನಲ್ಲಿ ಸಾತ್ವಿಕಾ, ಮುನಿಯಮ್ಮಾಳ್, ಜಾಸನ್, ಚಂದಿನಿ ಸೇರಿದಂತೆ ಒಟ್ಟು 19 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ‘ಕುಕ್ ವಿತ್ ಕೋಮಾಳಿ’ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದ ಅನ್ಸಾರ್ ಕೂಡ ಈ ಬಾರಿ ಸ್ಪರ್ಧಿಯಾಗಿದ್ದಾರೆ.

ಆದರೆ ಶೋ ಆರಂಭವಾಗಿ ಎರಡು ದಿನಗಳು ಕಳೆಯುವ ಮುನ್ನವೇ ಅನ್ಸಾರ್ ಬಿಗ್ ಬಾಸ್ ಮನೆಯಿಂದ ಹೊರಬರಲು ಯತ್ನಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಮನೆಯ ಗೋಡೆಯನ್ನು ಹತ್ತಿ ಹೊರಗೆ ಹೋಗಲು ಅವರು ಪ್ರಯತ್ನಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದಿನ ಸೀಸನ್‌ನ ಘಟನೆ ಮರುಕಳಿಸಿದೆಯೇ?

ತಮಿಳು ಬಿಗ್ ಬಾಸ್ ಸೀಸನ್ 1ರಲ್ಲಿ ನಟ ಭರಣಿ ಕೂಡ ಬಿಗ್ ಬಾಸ್ ಮನೆಯ ಗೋಡೆಯನ್ನು ಹತ್ತಿ ಹೊರಗೆ ಹೋಗಲು ಪ್ರಯತ್ನಿಸಿದ್ದರು. ಇದೀಗ ಅದೇ ರೀತಿಯಲ್ಲಿ ಅನ್ಸಾರ್ ಕೂಡ ಮನೆಯ ಗೋಡೆ ದಾಟಲು ಯತ್ನಿಸಿರುವುದು ಕುತೂಹಲ ಮೂಡಿಸಿದೆ.

‘ಕುಕ್ ವಿತ್ ಕೋಮಾಳಿ’ ಕಾರ್ಯಕ್ರಮದ ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದ ಅನ್ಸಾರ್, ಹಲವು ಟಿವಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೇ ಜನಪ್ರಿಯತೆಯೊಂದಿಗೆ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು.

ಆದರೆ ಮನೆಯೊಳಗೆ ನಡೆದ ಘಟನೆಗಳಿಂದ ಅವರು ಮನನೊಂದು ಈ ರೀತಿ ಹೊರಹೋಗಲು ಪ್ರಯತ್ನಿಸಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಸ್ಪರ್ಧಿ ಜಾಸನ್ ಅವರೊಂದಿಗೆ ನಡೆದ ಕೆಲವು ವಾಗ್ವಾದಗಳು ಹಾಗೂ ಕ್ಯಾಪ್ಟನ್ಸಿಗೆ ಸಂಬಂಧಿಸಿದ ಚರ್ಚೆಗಳು ಅನ್ಸಾರ್ ಅವರನ್ನು ಬೇಸರಗೊಳಿಸಿರಬಹುದು ಎನ್ನಲಾಗುತ್ತಿದೆ.

ಮೊದಲ ವಾರದಲ್ಲೇ ಹೈಡ್ರಾಮಾ

ಈ ಸೀಸನ್‌ನ ಮೊದಲ ವಾರದಲ್ಲೇ ಹಲವು ಹೊಸ ಟ್ವಿಸ್ಟ್‌ಗಳು ಕಾಣಿಸಿಕೊಂಡಿವೆ. ಸೀರಿಯಲ್ ನಟಿ ಸಾತ್ವಿಕ ಅವರನ್ನು ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿ ‘ಡೆಮಾಕ್ರಸಿ ರೂಮ್’ ಸೇರಿದಂತೆ ಹಲವು ಹೊಸ ಅಂಶಗಳನ್ನು ಪರಿಚಯಿಸಲಾಗಿದೆ.

ಮೊದಲ ದಿನವೇ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದ್ದು, ಆರಂಭದಿಂದಲೇ ಮನೆಯೊಳಗೆ ಟಾಸ್ಕ್‌ಗಳು, ಚರ್ಚೆಗಳು ಮತ್ತು ಭಿನ್ನಾಭಿಪ್ರಾಯಗಳು ಶುರುವಾಗಿವೆ.

ಆದರೆ ಅನ್ಸಾರ್ ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆಯೇ ಅಥವಾ ಇದು ಟಾಸ್ಕ್‌ನ ಭಾಗವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆಯ ಹಿಂದಿನ ನಿಖರ ಕಾರಣವೇನು ಎಂಬುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಬೇಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular