ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಸೆಪ್ಟೆಂಬರ್ 6 ರಿಂದ ‘ಬಿಗ್ ಬಾಸ್’ 13ನೇ ಸೀಸನ್ ಆರಂಭವಾಗಲಿದೆ.
ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್ ಸ್ಟಾರ್ ನಲ್ಲಿ ಶೋ ಪ್ರಸಾರವಾಗಲಿದೆ. ಮೂವರು ಜನಸಾಮಾನ್ಯರು ಹಾಗೂ ಸೆಲೆಬ್ರಿಟಿಗಳು ಈ ಬಾರಿ ‘ಬಿಗ್ ಬಾಸ್’ ಸ್ಪರ್ಧಿಗಳಾಗಿರುತ್ತಾರೆ. ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಗ್ರಾಂಡ್ ಪ್ರೀಮಿಯರ್ ನಡೆಯಲಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಟ ಸುದೀಪ್, ಎಂದಿನಂತೆ ‘ಬಿಗ್ ಬಾಸ್’ 100 ದಿನ ಶೋ ನಡೆಯಲಿದೆ. ಎಷ್ಟು ಮಂದಿ ಸ್ಪರ್ಧಿಗಳು ಇರುತ್ತಾರೆ ಎನ್ನುವುದು ಸೆಪ್ಟಂಬರ್ 6ಕ್ಕೆ ಗೊತ್ತಾಗಲಿದೆ. ಈ ಬಾರಿ ಫ್ಲೈಟ್ ಥೀಂನಲ್ಲಿ ಶೋ ಡಿಸೈನ್ ಮಾಡಲಾಗಿದೆ. ‘ಬಿಗ್ ಬಾಸ್’ ಅಗ್ನಿಪರೀಕ್ಷೆ ಕಾರ್ಯಕ್ರಮದಿಂದ ಮೂರು ಮಂದಿ ಜನಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದವರು ಸೆಲೆಬ್ರಿಟಿಗಳಾಗಿರುತ್ತಾರೆ ಎಂದು ಹೇಳಿದ್ದಾರೆ.

