HomeIndiaBIG UPDATE : ಟಿಬೆಟ್’ ನಲ್ಲಿ ಭೀಕರ ಭೂಕಂಪ : ಸಾವಿನ ಸಂಖ್ಯೆ 100 ಕ್ಕೇರಿಕೆ...

BIG UPDATE : ಟಿಬೆಟ್’ ನಲ್ಲಿ ಭೀಕರ ಭೂಕಂಪ : ಸಾವಿನ ಸಂಖ್ಯೆ 100 ಕ್ಕೇರಿಕೆ |Earthquake

ನವದೆಹಲಿ : ಟಿಬೆಟ್’ ನಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 100 ಕ್ಕೇರಿಕೆಯಾಗಿದೆ.

ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು ಭೂಕಂಪಗಳು ಟಿಬೆಟ್ನಲ್ಲಿ ಮಂಗಳವಾರ ಒಂದು ಗಂಟೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತ, ನೇಪಾಳ ಮತ್ತು ಭೂತಾನ್ ನ ಅನೇಕ ಪ್ರದೇಶಗಳಲ್ಲಿ ಭೂಕಂಪಗಳು ಕಟ್ಟಡಗಳನ್ನು ನಡುಗಿಸಿದವು.

ಭೂಕಂಪದಲ್ಲಿ ಟಿಬೆಟ್ನ ಶಿಗಾಟ್ಸೆ ಪ್ರದೇಶದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 130 ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular