HomeKarnatakaBREAKING : ಕಾಮಿಡಿ ಸ್ಟಾರ್ 'ಚಂದ್ರಪ್ರಭಾ' ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

BREAKING : ಕಾಮಿಡಿ ಸ್ಟಾರ್ ‘ಚಂದ್ರಪ್ರಭಾ’ ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ನಡೆದ ಕಾಮಿಡಿ ಸ್ಟಾರ್ ಚಂದ್ರಪ್ರಭಾ ಕಾರು ಅಪಘಾತ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಚಿಕ್ಕಮಗಳೂರಿನ ಆಟೋ ಚಾಲಕ ರಂಗನಾಥ್ ಎಂಬುವವರು ಅಪಘಾತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆಟೋ ಚಾಲಕ ರಂಗನಾಥ್ ಹೇಳಿದ್ದೇನು..?

ಚಂದ್ರಪ್ರಭಾ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆಯಿತು, ಆದರೆ ಚಂದ್ರಪ್ರಭಾ ಕಾರಿನಿಂದ ಇಳಿಯಲೇ ಇಲ್ಲಾ, ಅವರು ಕರೆಕ್ಟ್ ಆಗಿದ್ದರೆ ಮದ್ಯಪಾನ ಮಾಡದೇ ಇದ್ದರೆ ಗಾಡಿಯಿಂದ ಇಳಿಯುತ್ತಿದ್ದರು. ಬಳಿಕ ನಾನೇ ಗಾಯಾಳು ಬೈಕ್ ಸವಾರ ಮಾಲ್ತೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದೆ. ನನ್ನ ಆಟೋದಲ್ಲೇ ಕರೆದುಕೊಂಡು ಹೋದೆ. ಆದರೆ ಇಷ್ಟೆಲ್ಲಾ ನಡೆದರೂ ಚಂದ್ರಪ್ರಭಾ ಮಾನವೀಯತೆ ತೋರಲಿಲ್ಲ. ಆಸ್ಪತ್ರೆಗೆ ಕೂಡ ಬರದೇ ಓಡಿ ಹೋದರು ಎಂದು ಆಟೋ ಚಾಲಕ ರಂಗನಾಥ್ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಹಿನ್ನೆಲೆ

ಚಿಕ್ಕಮಗಳೂರು ಜಿಲ್ಲೆಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಮಾಲ್ತೇಶ್ ಎಂಬ ಬೈಕ್ ಸವಾರನಿಗೆ ಚಂದ್ರಪ್ರಭಾ ಕಾರು ಡಿಕ್ಕಿ ಹೊಡೆದಿದೆ . ಚಂದ್ರಪ್ರಭ ಅವರು ಹಿಟ್ & ರನ್ ಮಾಡಿ ಪರಾರಿ ಆಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಬೈಕ್ ಸವಾರ ಮದ್ಯಪಾನ ಮಾಡಿದ್ದನು, ನಾವೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಚಂದ್ರಪ್ರಭಾ ಹೇಳಿದ್ದಾರೆ. ನನ್ನ ತಮ್ಮನಿಗೆ ಕುಡಿಯುವ ಅಭ್ಯಾಸವಿಲ್ಲ ಎಂದು ಗಾಯಾಳು ಮಾಲ್ತೇಶ್ ಅಣ್ಣ ರಘು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular