HomeKarnatakaರಾಜ್ಯ ಸರ್ಕಾರದಿಂದ ʻರೈತರಿಗೆ ಬಿಗ್ ಶಾಕ್ʼ : ʻKRSʼ ನಿಂದ ನಾಲೆಗಳಿಗೆ ನೀರು ಹರಿಸದಿರಲು ತೀರ್ಮಾನ

ರಾಜ್ಯ ಸರ್ಕಾರದಿಂದ ʻರೈತರಿಗೆ ಬಿಗ್ ಶಾಕ್ʼ : ʻKRSʼ ನಿಂದ ನಾಲೆಗಳಿಗೆ ನೀರು ಹರಿಸದಿರಲು ತೀರ್ಮಾನ

ಮಂಡ್ಯ : ರೈತರಿಗೆ ರಾಜ್ಯ ಸರ್ಕಾರವು ಬಿಗ್‌ ಶಾಕ್‌ ನೀಡಿದ್ದು, ಕೆಆರ್‌ ಎಸ್‌ ನಿಂದ ನಾಲೆಗಳಿಗೆ ನೀರು ಹರಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.

ಕೆಆರ್‌ ಎಸ್‌ ಜಲಾಶಯದಲ್ಲಿ ನೀರು ಬರಿದಾಗುತ್ತಿರುವ ಕಾರಣ ಸರ್ಕಾರ ಇದೀಗ ಬೇಸಿಗೆ ಬೆಳೆಗೆ ನೀರು ಹರಿಸದಿರಲು ತಿರ್ಮಾನ ಮಾಡಿದ್ದು, ಬೇಸಿಗೆ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ಜಲಾಯಶ ಭರ್ತಿಯಾಗಿಲ್ಲ. ಹೀಗಾಗಿ ಜಲಾಶಯದಲ್ಲಿ ಇರುವ ನೀರಿನ ಲಭ್ಯತೆಯನ್ನ ನೋಡಿಕೊಂಡು, ಕುಡಿಯುವುದಕ್ಕೆ ಮೀಸಲು ಇಟ್ಟು, ಬೇಸಿಗೆ ಬೆಳೆಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular