HomeLatest Newsವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್: ಏಕಾಏಕಿ ಸಸ್ಪೆಂಡ್ ಆಗುತ್ತಿರುವ ಖಾತೆಗಳು; ಕಾರಣವೇನು?

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್: ಏಕಾಏಕಿ ಸಸ್ಪೆಂಡ್ ಆಗುತ್ತಿರುವ ಖಾತೆಗಳು; ಕಾರಣವೇನು?

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸ್ಆಪ್ (WhatsApp) ವಿಶ್ವದಾದ್ಯಂತ ಹಲವಾರು ಬಳಕೆದಾರರ ಖಾತೆಗಳನ್ನು ಏಕಾಏಕಿ 24 ಗಂಟೆಗಳ “Account Under Review” ಪರಿಶೀಲನೆಗೆ ಒಳಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್ WhatsApp ಬಳಸುವ ಹಲವಾರು ಬಳಕೆದಾರರಿಗೆ ಅನಿರೀಕ್ಷಿತ ಶಾಕ್ ಎದುರಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಕೆಲವರ ಖಾತೆಗಳು ಏಕಾಏಕಿ “Account Under Review” ಸ್ಥಿತಿಗೆ ಹೋಗಿದ್ದು, 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ಸ್ವಯಂಚಾಲಿತ ಭದ್ರತಾ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ ಎಂದು Meta ಸ್ಪಷ್ಟನೆ ನೀಡಿದೆ.

ಭಾರತ ಸೇರಿದಂತೆ ಹಲವು ದೇಶಗಳ ಬಳಕೆದಾರರು ಆಗಸ್ಟ್ 3ರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಯಾವುದೇ ಮುನ್ಸೂಚನೆ ಇಲ್ಲದೆ ತಮ್ಮ ವಾಟ್ಸ್ಆಪ್ ಖಾತೆಗಳು ಸ್ಥಗಿತಗೊಂಡಿರುವುದನ್ನು ಗಮನಿಸಿದ್ದಾರೆ. ವಾಟ್ಸ್ಆಪ್ ತೆರೆಯುವಾಗ “Account in review” ಎಂಬ ಸಂದೇಶ ಕಾಣಿಸಿಕೊಂಡಿದ್ದು, ನಿಯಮ ಉಲ್ಲಂಘನೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಖಾತೆಯ ಚಟುವಟಿಕೆಗಳು ಹಾಗೂ ಸಾಧನದ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. 24 ಗಂಟೆಗಳೊಳಗೆ ಫಲಿತಾಂಶ ತಿಳಿಸಲಾಗುವುದು ಎಂದು ಪರದೆಯಲ್ಲಿ ಸಂದೇಶ ತೋರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧಿಕೃತ ವಾಟ್ಸ್ಆಪ್ ಆಪ್ ಬಳಸುತ್ತಿದ್ದರೂ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಖಾತೆಗಳು ಸ್ಥಗಿತಗೊಂಡಿರುವುದರಿಂದ ವೃತ್ತಿಪರ ಕೆಲಸಗಳಿಗೆ ತೊಂದರೆಯಾಗಿದೆ ಎಂದು ಹಲವರು ಎಕ್ಸ್ (X) ಹಾಗೂ ಥ್ರೆಡ್ಸ್ (Threads) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ತಾಂತ್ರಿಕ ಸಮಸ್ಯೆಗೆ ಸಂಬಂಧಿಸಿದಂತೆ ವಾಟ್ಸ್ಆಪ್‌ನ ಮಾತೃಸಂಸ್ಥೆ ಮೆಟಾ (Meta) ಪ್ರತಿಕ್ರಿಯೆ ನೀಡಿದೆ. ಸ್ಪ್ಯಾಮ್ ಹಾಗೂ ದುರುಪಯೋಗವನ್ನು ತಡೆಯುವ ಸ್ವಯಂಚಾಲಿತ ಭದ್ರತಾ ವ್ಯವಸ್ಥೆಯ (Automated Security System) ದೋಷದಿಂದ ನೈಜ ಬಳಕೆದಾರರ ಖಾತೆಗಳೂ ತಪ್ಪಾಗಿ ಗುರುತಿಸಲ್ಪಟ್ಟಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.ಕಂಪನಿಯ ವಕ್ತಾರರ ಪ್ರಕಾರ, “ಬಳಕೆದಾರರ ಸುರಕ್ಷತೆ ಹಾಗೂ ವಾಟ್ಸ್ಆಪ್ ದುರುಪಯೋಗವಾಗದಂತೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಅಲ್ಗಾರಿದಮ್ ದೋಷಗಳು ಸಂಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸಿ, ಬಳಕೆದಾರರ ಖಾತೆಗಳನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ. ಪ್ರಸ್ತುತ, ಈ ಸಮಸ್ಯೆಯಿಂದ ಪರಿಣಾಮಕ್ಕೊಳಗಾದ ಬಳಕೆದಾರರ ವಾಟ್ಸ್ಆಪ್ ಖಾತೆಗಳನ್ನು ಮರುಸಕ್ರಿಯಗೊಳಿಸುವ ಕಾರ್ಯವನ್ನು ಮೆಟಾ ಆರಂಭಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular