HomeLatest NewsBIG NEWS : ದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ : ಖಾಸಗಿ ಬಸ್,...

BIG NEWS : ದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ : ಖಾಸಗಿ ಬಸ್, KSRTC ಟಿಕೆಟ್ ದರ ಹೆಚ್ಚಳ.!

ಬೆಂಗಳೂರು : ದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಹಾಗೂ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಹೆಚ್ಚಳವಾಗಿದೆ.

ಹೌದು. ಬೆಂಗಳೂರು- ಮೈಸೂರು ಟಿಕೆಟ್ ದರ ಹೆಚ್ಚಳವಾಗಿದ್ದು, ಬಸ್ ಟಿಕೆಟ್ ದರದಲ್ಲಿ 20 ರೂ ಏರಿಕೆ ಮಾಡಲಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ದರ ಏರಿಕೆಯಾಗಿದೆ. ಟಿಕೆಟ್ ದರ 19 ರೂಪಾಯಿ ಹೆಚ್ಚಳ ಮಾಡಲಾಗಿದೆ. ದಸರಾ ಹಬ್ಬಕ್ಕೂ ಮುನ್ನ ಬಸ್ ಟಿಕೆಟ್ ದರ 161 ರೂಪಾಯಿ ಇತ್ತು. ಇದೀಗ 19 ರೂಪಾಯಿ ಏರಿಕೆಯಾಗಿದ್ದು, ಬೆಂಗಳೂರು-ಮೈಸೂರು ಬಸ್ ಟಿಕೆಟ್ ದರ 180ಕ್ಕೆ ಏರಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾಸಗಿ ಬಸ್ ಗಳಿಂದ ಸುಲಿಗೆ
ಹಬ್ಬ ಹರಿದಿನಗಳು ಬಂದರೆ ಸಾಕು ಖಾಸಗಿ ಬಸ್ ಗಳು ಸುಲಿಗೆ ಮಾಡಲು ಶುರು ಮಾಡುತ್ತದೆ. ಖಾಸಗಿ ಬಸ್ ಗಳು ಕೂಡ ದಸರಾ ಹಬ್ಬದ ಹಿನ್ನೆಲೆ ಟಿಕೆಟ್ ದರ ಹೆಚ್ಚಿಸಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ 1000 ರಿಂದ 2039 ರೂ ಹೆಚ್ಚಳ ಮಾಡಿದೆ. ಬೆಂಗಳೂರಿನಿಂದ ದಾವಣಗೆರೆಗೆ 750 ರಿಂದ 1489 ರೂ ಹೆಚ್ಚಳ ಮಾಡಿದೆ. ಬೆಂಗಳೂರಿನಿಂದ ಬೆಳಗಾವಿಗೆ 1200 ರೂ ಯಿಂದ 2677 ರವರೆಗೆ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular