HomeKarnatakaಮದ್ಯಪ್ರಿಯರಿಗೆ ಬಿಗ್ ಶಾಕ್: ಜನಸಾಮಾನ್ಯರು ಬಳಸುವ ಅಗ್ಗದ ಮದ್ಯಗಳ ದರ ಶೇ. 30ರಷ್ಟು ಏರಿಕೆ

ಮದ್ಯಪ್ರಿಯರಿಗೆ ಬಿಗ್ ಶಾಕ್: ಜನಸಾಮಾನ್ಯರು ಬಳಸುವ ಅಗ್ಗದ ಮದ್ಯಗಳ ದರ ಶೇ. 30ರಷ್ಟು ಏರಿಕೆ

ಮದ್ಯದಲ್ಲಿ ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸುವ ಹೊಸ ಅಬಕಾರಿ ನೀತಿ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಯಾಗಿದೆ. ಇದರೊಂದಿಗೆ ಜನಸಾಮಾನ್ಯರು ಬಳಕೆ ಮಾಡುವ ಅಗ್ಗದ ಮದ್ಯಗಳ ಬೆಲೆ ಶೇಕಡ 30ರಷ್ಟು ದುಬಾರಿಯಾಗಲಿದೆ.

ಪ್ರೀಮಿಯಂ ಮತ್ತು ಐಷಾರಾಮಿ ವಿದೇಶಿ ಬ್ರಾಂಡ್ ಮದ್ಯಗಳ ದರ ಗಣನೀಯವಾಗಿ ಇಳಿಕೆಯಾಗಲಿದೆ. ರಾಜ್ಯದಲ್ಲಿ ಇದುವರೆಗೂ ಜಾರಿಯಲ್ಲಿದ್ದ ದಶಕಗಳಷ್ಟು ಹಳೆಯ ಬಲ್ಕ್ ಲೀಟರ್ ಆಧರಿತ ಸ್ಲ್ಯಾಬ್ ವಾರು ತೆರಿಗೆ ಪದ್ಧತಿಗೆ ಸರ್ಕಾರ ಇತಿಶ್ರೀ ಹಾಡಿದ್ದು, ದೇಶದಲ್ಲೇ ಮೊದಲ ಬಾರಿಗೆ ಆಲ್ಕೋಹಾಲ್ ಇನ್ ಬಿವರೇಜ್ ಅಬಕಾರಿ ನೀತಿಯನ್ನು ಮೇ 11 ಸೋಮವಾರದಿಂದ ಅಧಿಕೃತವಾಗಿ ಜಾರಿ ಮಾಡಲಾಗಿದೆ.

ಹೊಸ ನೀತಿಯಲ್ಲಿ ಅಬಕಾರಿ ಸ್ಲ್ಯಾಬ್ ಗಳ ಸಂಖ್ಯೆಯನ್ನು 16 ರಿಂದ 8ಕ್ಕೆ ಎಳಿಕೆ ಮಾಡಲಾಗಿದೆ. ಈ ಸರಳೀಕರಣ ಮೂಲಕ ತೆರಿಗೆ ವ್ಯವಸ್ಥೆ ಸುಲಭ ಮಾಡಿದ್ದರೂ ಇದರ ನೇರ ಹೊಡೆತ ಅಗ್ಗದ ಮದ್ಯ ಖರೀದಿಸುವ ಗ್ರಾಹಕರ ಮೇಲೆ ಬೀಳುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯ ಜನರು ಹೆಚ್ಚಾಗಿ ಬಳಕೆ ಮಾಡುವ ರಮ್, ವಿಸ್ಕಿ, ಬ್ರಾಂಡಿ, ಮತ್ತು ವೋಡ್ಕಾ ಬೆಲೆ ಭಾರಿ ಏರಿಕೆಯಾಗಲಿದೆ. 180 ಮಿಲಿಯ ಕ್ವಾರ್ಟರ್ ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳ ಮದ್ಯದ ಬೆಲೆ ಶೇಕಡ 20 ರಿಂದ 30 ರಷ್ಟು ಹೆಚ್ಚಳವಾಗಲಿದೆ. ಕಳೆದ ವರ್ಷ 63 ರೂಪಾಯಿ ಇದ್ದ ಕ್ವಾರ್ಟರ್ ಮದ್ಯದ ದರ ಇತ್ತೀಚೆಗೆ ದರ ಏರಿಕೆಯ ನಂತರ 80 ರೂ.ಗೆ ತಲುಪಿತ್ತು. ಹೊಸ ನೀತಿಯಿಂದ 105 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.

ಅಗ್ಗದ ದರ ಇದ್ದ ಮೊದಲ ಐದು ಸ್ಲ್ಯಾಬ್ ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡ 20 ರಿಂದ 30 ರಷ್ಟು ಹೆಚ್ಚಿಸಲಾಗಿದೆ. ರಾಜ್ಯದ ಒಟ್ಟರೆ ಅಬಕಾರಿ ಆದಾಯದಲ್ಲಿ ಮೊದಲ ಐದು ಸ್ಲ್ಯಾಬ್ ನ ಮದ್ಯಗಳ ಕೊಡುಗೆ ಶೇಕಡ 70 ರಿಂದ 75 ರಷ್ಟು ಇದೆ.

ಜನಸಾಮಾನ್ಯರ ಮೆಚ್ಚಿನ ಆಯ್ಕೆಯ ಅಗ್ಗದ ಮದ್ಯದ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಇದು ಗ್ರಾಹಕರು ಮತ್ತು ಮದ್ಯ ತಯಾರಿಕಾ ಘಟಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular