HomeKarnatakaBUDGET BREAKING : 'ಮದ್ಯ' ಪ್ರಿಯರಿಗೆ ಬಿಗ್ ಶಾಕ್ : ಮದ್ಯದ ದರದಲ್ಲಿ ಭಾರಿ ಏರಿಕೆ.!

BUDGET BREAKING : ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಮದ್ಯದ ದರದಲ್ಲಿ ಭಾರಿ ಏರಿಕೆ.!

ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಆಯವ್ಯಯದಲ್ಲಿ ಬಿಗ್ ಶಾಕ್ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸುವ ಸವಾಲಿನ ನಡುವೆ, ಅಬಕಾರಿ ಸುಂಕವನ್ನು (Excise Duty) ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹಂತ ಹಂತವಾಗಿ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.ಅದೇ ರೀತಿ ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಘೋಷಣೆಯಾಗಿದ್ದು, ಮದ್ಯದ ದರವನ್ನು ಉತ್ಪಾದಕರೇ ಹೆಚ್ಚಳ ಮಾಡಲಿದ್ದಾರೆ.

ದರ ಏರಿಕೆ ಅಂದಾಜು: ಈ ನಿರ್ಧಾರದಿಂದಾಗಿ ಕಡಿಮೆ ಬೆಲೆಯ (Economy range) ಮದ್ಯದ ಬಾಟಲಿಗಳ ಮೇಲೆ ಅಂದಾಜು 10 ರಿಂದ 20 ರೂ. ಹಾಗೂ ಪ್ರೀಮಿಯಂ ಮದ್ಯದ ಮೇಲೆ 50 ರಿಂದ 100 ರೂ. ವರೆಗೆ ದರ ಹೆಚ್ಚಾಗುವ ಸಾಧ್ಯತೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದಾಯದ ಗುರಿ: ಅಬಕಾರಿ ಇಲಾಖೆಯಿಂದ ಈ ವರ್ಷ ಸುಮಾರು 45,000 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಬೃಹತ್ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಏಕೆ ಈ ಏರಿಕೆ? ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಸುಮಾರು 55,000 ಕೋಟಿ ರೂ.ಗಳಿಗೂ ಅಧಿಕ ಹಣದ ಅವಶ್ಯಕತೆಯಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮೀಸಲಿಡಲು ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular