HomeKarnatakaಭೀಕರ ಬರದಿಂದ ಕಂಗಾಲಾದ ರೈತರಿಗೆ ಬಿಗ್ ಶಾಕ್!

ಭೀಕರ ಬರದಿಂದ ಕಂಗಾಲಾದ ರೈತರಿಗೆ ಬಿಗ್ ಶಾಕ್!

ಗದಗ : ಭೀಕರ ಬರಗಾಲಕ್ಕೆ ಕಂಗಾಲಾಗಿರುವ ರೈತರಿಗೆ ಗದಗ ಜಿಲ್ಲಾಡಳಿತ ಬಿಗ್ ಶಾಕ್ ಕೊಟ್ಟಿದ್ದು, ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ ಆಗಿಲ್ಲ.

ಹೌದು, ಸರ್ಕಾರವು ಗದಗ ಜಿಲ್ಲೆಗೆ ರಾಜ್ಯದಲ್ಲೇ ಅತಿ ಹೆಚ್ಚು 35 ಕೋಟಿ ರೂ. ಬಿಡುಗಡೆ ಮಾಡಿದೆ. ಸರ್ಕಾರಿದಂದ ಹಣ ಬಿಡುಗಡೆ ಆದ್ರೂ ರೈತರಿಗೆ ಬೆಳೆ ವಿಮೆ ಹಣವನ್ನು ಗದಗ ಜಿಲ್ಲಾಡಳಿತ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಸಲ್ ಬೀಮಾ ಯೋಜನೆಯಡಿ ಸರ್ಕಾರ ಗದಗ ಜಿಲ್ಲೆಯೊಂದಕ್ಕೆ 35 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಈ ವರೆಗೆ ರೈತರಿಗೆ ಒಂದೂ ತಿಂಗಳಾದ್ರೂ ಕೂಡ ಹಣ ಬಿಡುಗಡೆ ಮಾಡಿಲ್ಲ. ಬರದಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಜಿಲ್ಲಾಡಳಿತ ಹಣ ನೀಡದೇ ಸತಾಯಿಸುತ್ತಿದೆ. ಜಿಲ್ಲಾಡಳಿತದ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular