HomeLatest NewsBIG NEWS : ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್ : ಇಂದಿನಿಂದ 'ಇಂಡಿಗೋ ಟಿಕೆಟ್' ದರ...

BIG NEWS : ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್ : ಇಂದಿನಿಂದ ‘ಇಂಡಿಗೋ ಟಿಕೆಟ್’ ದರ ಭಾರಿ ಏರಿಕೆ !

ವಿಮಾನ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದ್ದು, ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo) ಇಂದಿನಿಂದ (ಏಪ್ರಿಲ್ 2, 2026) ಅನ್ವಯವಾಗುವಂತೆ ಟಿಕೆಟ್ ದರದಲ್ಲಿ ಗಣನೀಯ ಏರಿಕೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವಿಮಾನ ಇಂಧನ (ATF) ಬೆಲೆ ಶೇ. 130ಕ್ಕಿಂತ ಹೆಚ್ಚು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಈ ನಿರ್ಧಾರ ಕೈಗೊಂಡಿದೆ.

ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ, ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಇಂಧನ ಸರ್‌ಚಾರ್ಜ್ ಅನ್ನು ಹೆಚ್ಚಿಸಿದೆ. ಪ್ರಯಾಣದ ದೂರ ಮತ್ತು ಮಾರ್ಗಕ್ಕೆ ಅನುಗುಣವಾಗಿ ಈ ದರವು 275 ರೂಪಾಯಿಯಿಂದ 10,000 ರೂಪಾಯಿಯವರೆಗೆ ಇರಲಿದೆ.

ಸರ್ಕಾರವು ವಿಮಾನ ಇಂಧನ (ATF) ದರವನ್ನು ಪರಿಷ್ಕರಿಸಿದ ಬೆನ್ನಲ್ಲೇ ಇಂಡಿಗೋ ಈ ನಿರ್ಧಾರ ಕೈಗೊಂಡಿದೆ. ಇದು ದೇಶೀಯ ಮತ್ತು ಅಂತರಾಷ್ಟ್ರೀಯ ಎರಡೂ ವಿಮಾನ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರಿಷ್ಕೃತ ಇಂಧನ ಶುಲ್ಕದ ವಿವರ (ದೇಶೀಯ ವಿಮಾನಗಳು):

ಪ್ರಯಾಣದ ದೂರ (ಕಿ.ಮೀ)ಇಂಧನ ಸರ್‌ಚಾರ್ಜ್ (ರೂಪಾಯಿಗಳಲ್ಲಿ)
0 ರಿಂದ 500 ಕಿ.ಮೀ₹275
501 ರಿಂದ 1000 ಕಿ.ಮೀ₹400
1001 ರಿಂದ 1500 ಕಿ.ಮೀ₹600
1501 ರಿಂದ 2000 ಕಿ.ಮೀ₹800
2000 ಕಿ.ಮೀ ಗಿಂತ ಹೆಚ್ಚು₹900

ಅಂತರಾಷ್ಟ್ರೀಯ ವಿಮಾನಗಳ ದರಪಟ್ಟಿ:

  • ಭಾರತೀಯ ಉಪಖಂಡ: 500 ಕಿ.ಮೀ ವರೆಗೆ ₹900; 500 ಕಿ.ಮೀ ಗಿಂತ ಹೆಚ್ಚು ₹2500.
  • ಗಲ್ಫ್ ಮತ್ತು ಮಧ್ಯಪ್ರಾಚ್ಯ: 2000 ಕಿ.ಮೀ ವರೆಗೆ ₹3000; 2000 ಕಿ.ಮೀ ಗಿಂತ ಹೆಚ್ಚು ₹5000.
  • ಆಫ್ರಿಕಾ: ₹5000.
  • ಗ್ರೀಸ್ ಮತ್ತು ಟರ್ಕಿ: ₹7500.
  • ಬ್ರಿಟನ್ ಮತ್ತು ಯುರೋಪ್: ₹10,000.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular