ಕೃತಕ ಬುದ್ಧಿಮತ್ತೆಯ (AI) ಹಾವಳಿಯಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಆತಂಕ ಮನೆಮಾಡಿರುವ ಬೆನ್ನಲ್ಲೇ, ಜಾಗತಿಕ ಸಲಹಾ ಸಂಸ್ಥೆ ಡೆಲಾಯ್ಟ್’ (Deloitte) ಭಾರತೀಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.
ಭಾರತದಲ್ಲಿ ಸುಮಾರು 50,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ತನ್ನ ಬೃಹತ್ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಎಐ ತಂತ್ರಜ್ಞಾನದಿಂದ ಕೆಲಸಗಳು ನಷ್ಟವಾಗುವ ಬದಲು ಅವುಗಳ ಸ್ವರೂಪ ಬದಲಾಗಲಿದ್ದು, ನವೀನ ಕೌಶಲ್ಯಗಳನ್ನು ಮೈಗೂಡಿಸಿಕೊಂಡವರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ ಎಂದು ಸಂಸ್ಥೆಯ ದಕ್ಷಿಣ ಏಷ್ಯಾ ಸಿಒಒ ನಿತಿನ್ ಕಿಣಿ ಭರವಸೆ ನೀಡಿದ್ದಾರೆ. ಈ ಮೂಲಕ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಯುವಜನತೆಯಲ್ಲಿ ಹೊಸ ಭರವಸೆ ಮೂಡಿದೆ.
ಹೌದು. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದಾಗಿ ಉದ್ಯೋಗಗಳು ನಷ್ಟವಾಗುತ್ತವೆ ಎಂಬ ಆತಂಕದ ನಡುವೆಯೇ, ಜಾಗತಿಕ ಸಲಹಾ ಸಂಸ್ಥೆಯಾದ ಡೆಲಾಯ್ಟ್(Deloitte) ಮಹತ್ವದ ಸ್ಪಷ್ಟನೆ ನೀಡಿದೆ. ಭಾರತದಲ್ಲಿ ಹಮ್ಮಿಕೊಂಡಿರುವ 50,000 ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಯೋಜನೆ ನಿಗದಿತವಾಗಿ ಮುಂದುವರಿಯಲಿದೆ ಎಂದು ಸಂಸ್ಥೆಯ ದಕ್ಷಿಣ ಏಷ್ಯಾ ಸಿಒಒ (COO) ನಿತಿನ್ ಕಿಣಿ ತಿಳಿಸಿದ್ದಾರೆ.
:ಎಐ ಬಂದ ತಕ್ಷಣ ಉದ್ಯೋಗಗಳು ಹೋಗುವುದಿಲ್ಲ, ಬದಲಿಗೆ ಕೆಲಸ ಮಾಡುವ ವಿಧಾನ ಬದಲಾಗುತ್ತದೆ. ಕೌಶಲ್ಯಗಳನ್ನು ಹೆಚ್ಚಿಸಿಕೊಂಡರೆ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದು ಸಂಸ್ಥೆ ಹೇಳಿದೆ.ಭಾರತದಲ್ಲಿ 50,000 ಪರಿಣಿತರನ್ನು ನೇಮಿಸಿಕೊಳ್ಳುವ ಗುರಿಯನ್ನು ಡೆಲಾಯ್ಟ್ ಹೊಂದಿದ್ದು, ಇದು ಸಂಸ್ಥೆಯ ದೀರ್ಘಕಾಲೀನ ಕಾರ್ಯತಂತ್ರದ ಭಾಗವಾಗಿದೆ.ಈಗಾಗಲೇ ಸಂಸ್ಥೆಯ 30,000 ಉದ್ಯೋಗಿಗಳಿಗೆ ಎಐ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗಿದ್ದು, ಉಳಿದ 20,000 ಜನರನ್ನು ಆಂತರಿಕ ವೇದಿಕೆಗಳಲ್ಲಿ ಸಜ್ಜುಗೊಳಿಸಲಾಗುತ್ತಿದೆ.
ಭಾರತವೇ ಪ್ರಮುಖ ಕೇಂದ್ರ: ಡಾಲಾಯ್ಟ್‌ನ ಜಾಗತಿಕ ಉದ್ಯೋಗಿಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಭಾರತದಲ್ಲೇ ಇದ್ದಾರೆ. ಅಲ್ಲದೆ, ಭಾರತದಲ್ಲಿ‘ಕ್ವಾಂಟಮ್ ಸೆಂಟರ್ ಆಫ್ ಎಕ್ಸಲೆನ್ಸ್” ಸ್ಥಾಪಿಸಲು ಸಂಸ್ಥೆ ಸಿದ್ಧತೆ ನಡೆಸುತ್ತಿದೆ.
ಸವಾಲುಗಳು ಮತ್ತು ಭವಿಷ್ಯ
ಭಾರತದ ಸರ್ಕಾರಿ ಸಂಸ್ಥೆಗಳು ಮತ್ತು ದೊಡ್ಡ ಕಂಪನಿಗಳು ಡೇಟಾ ಸುರಕ್ಷತೆ ಹಾಗೂ ವೆಚ್ಚದ ಕಾರಣಗಳಿಂದ ಎಐ ಅಳವಡಿಕೆಗೆ ಸ್ವಲ್ಪ ಹಿಂಜರಿಯುತ್ತಿವೆ. ಆದರೆ, ಸೈಬರ್ ಭದ್ರತೆ ಮತ್ತು ಎಐ ಎರಡರಲ್ಲೂ ಭಾರತ ಮುಂಚೂಣಿಯಲ್ಲಿರಬೇಕು ಎಂಬುದು ಸಂಸ್ಥೆಯ ಆಶಯವಾಗಿದೆ.

