HomeLatest NewsBIG NEWS: ಪಠ್ಯಕ್ರಮ ರೂಪಿಸುವ ಅಧಿಕಾರ ಯುಜಿಸಿಗೆ ಇಲ್ಲ: ಕೇರಳ ಬಳಿಕ ಕರ್ನಾಟಕದಿಂದಲೂ ವಿರೋಧ

BIG NEWS: ಪಠ್ಯಕ್ರಮ ರೂಪಿಸುವ ಅಧಿಕಾರ ಯುಜಿಸಿಗೆ ಇಲ್ಲ: ಕೇರಳ ಬಳಿಕ ಕರ್ನಾಟಕದಿಂದಲೂ ವಿರೋಧ

ಬೆಂಗಳೂರು: ಯುಜಿಸಿ ಪಠ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದಲೂ ವಿರೋಧ ವ್ಯಕ್ತವಾಗಿದೆ. ಕೇರಳದ ಬಳಿಕ ರಾಜ್ಯದಲ್ಲಿಯೂ ಯುಜಿಸಿ ಪಠ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.

ಪಠ್ಯಕ್ರಮ ರಚನೆಯಲ್ಲಿ ಯುಜಿಸಿ ಮೂಗು ತೂರಿಸುತ್ತಿದೆ ಎಂದು ಆರೋಪಿಸಲಾಗಿದೆ. ಯುಜಿಸಿ ಪಠ್ಯಕ್ರಮ ಒಪ್ಪುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದು, ಯುಜಿಸಿಗೆ ಪಠ್ಯಕ್ರಮ ರೂಪಿಸುವ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.

ಯುಜಿಸಿ ಕೇವಲ ಪಠ್ಯ ಕ್ರಮದ ಚೌಕಟ್ಟನ್ನು ಮಾತ್ರ ನೀಡಬೇಕು. ಹೀಗಾಗಿ ಯುಜಿಸಿ ಕರಡು ಪ್ರತಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಯುಜಿಸಿ ಒಂದು ನಿಯಂತ್ರಣ ಸಂಸ್ಥೆ ಅಷ್ಟೇ. ಪಠ್ಯ ರೂಪಿಸಲು ಅಧಿಕಾರ ಹೊಂದಿಲ್ಲ. ಪಠ್ಯಕ್ರಮ ರೂಪಿಸುವ ಅಧಿಕಾರ ವಿವಿ ಅಧ್ಯಯನ ಮಂಡಳಿಗೆ ಇದೆ. ಯುಜಿಸಿ ಪಠ್ಯಕ್ರಮ ರೂಪಿಸಲು ಅಧ್ಯಯನ ಮಾಡಲು ಸಮಿತಿ ರಚಿಸಲಾಗಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular