HomeLatest NewsBIG NEWS: ಕ್ವಿಂಟಾಲ್ ಗೆ 71 ಸಾವಿರ ರೂ. ಗಡಿ ದಾಟಿದ ಕೆಂಪು ಮೆಣಸಿನಕಾಯಿ ದರ

BIG NEWS: ಕ್ವಿಂಟಾಲ್ ಗೆ 71 ಸಾವಿರ ರೂ. ಗಡಿ ದಾಟಿದ ಕೆಂಪು ಮೆಣಸಿನಕಾಯಿ ದರ

ಹುಬ್ಬಳ್ಳಿ: ಏರುಗತಿಯಲ್ಲಿ ಸಾಗುತ್ತಿರುವ ಕೆಂಪು ಮೆಣಸಿನಕಾಯಿ ದರ ಕ್ವಿಂಟಾಲ್ ಗೆ 71 ಸಾವಿರ ರೂಪಾಯಿ ಗಡಿ ದಾಟಿದೆ.

ಶನಿವಾರ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಕೆಂಪು ಮೆಣಸಿನಕಾಯಿ ದರ 70 ಸಾವಿರ ರೂ.ಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಇದು ಈ ವರ್ಷದ ಸೀಸನ್ ಆರಂಭದ ಗರಿಷ್ಠ ದರವಾಗಿದೆ. ಮುಂದಿನ ದಿನಗಳಲ್ಲಿ ಒಂದು ಕ್ವಿಂಟಾಲ್ ಕೆಂಪು ಮೆಣಸಿನಕಾಯಿ ದರ ಒಂದು ಲಕ್ಷ ರೂ.ಗೆ ತಲುಪಬಹುದು ಎನ್ನಲಾಗಿದೆ.

ಬ್ಯಾಡಗಿ ತಳಿಯ ಡಬ್ಬಿ ಮತ್ತು ಕಡ್ಡಿ ಮೆಣಸಿನ ಕಾಯಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಎಪಿಎಂಸಿಗೆ ಬರುತ್ತಿದೆ. ಶನಿವಾರ 1400 ಕ್ವಿಂಟಾಲ್ ಮೆಣಸಿನಕಾಯಿ ಆವಕವಾಗಿತ್ತು. ಕುಂದಗೋಳ ಪ್ರದೇಶದಲ್ಲಿ ಬೆಳೆಯುವ ಕಡ್ಡಿ ತಳಿಯ ಮೆಣಸಿನಕಾಯಿಗೆ ಅಂಗಡಿಯೊಂದರಲ್ಲಿ ಕ್ವಿಂಟಾಲ್ ಗೆ 53,119 ರೂ., ಡಬ್ಬಿ ತಳಿ ಮೆಣಸಿನಕಾಯಿಗೆ 71,333 ರೂಪಾಯಿ ಗರಿಷ್ಠ ದರ ಲಭ್ಯವಾಗಿದೆ. ಬೇರೆ ಕಡೆಗಳಿಂದ ಹುಬ್ಬಳ್ಳಿ ಎಪಿಎಂಸಿಗೆ ಬರುವ ಖರೀದಿದಾರರು ಟೆಂಡರ್ ಹಾಕುತ್ತಿರುವುದರಿಂದ ಬೆಳೆಗಾರರಿಗೆ ಉತ್ತಮ ದರ ಸಿಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular