ನವದೆಹಲಿ: ನೀಟ್, ಜೆಇಇ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಪರೀಕ್ಷೆಗಳಿಗೆ ಇನ್ನು ಫೇಸ್ ರೆಕಗ್ನಿಷನ್ ವ್ಯವಸ್ಥೆ ಪರಿಚಯಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಚಿಂತನೆ ನಡೆಸಿದೆ.
ಮುಂದಿನ ವರ್ಷದಿಂದ ಜೆಇಇ, ನೀಟ್ ನಂತಹ ಪ್ರಮುಖ ಪ್ರವೇಶಾತಿ ಪರೀಕ್ಷೆಗಳ ವೇಳೆಯಲ್ಲಿ ಗುರುತು ಪರಿಶೀಲನೆಗಾಗಿ ಮುಖ ಗುರುತಿಸುವಿಕೆ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಅಲ್ಲದೆ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವೇಳೆಯಲ್ಲೇ ಅಭ್ಯರ್ಥಿಗಳ ಫೋಟೋ ತೆಗೆಯುವ ಬಗ್ಗೆ ಯೋಚಿಸಲಾಗುತ್ತಿದೆ.
ಅಕ್ರಮ ತಡೆಯಲು 2025 ರ ನೀಟ್ ವೇಳೆ ಆಧಾರ್ ಕಾರ್ಡ್ ನಲ್ಲಿ ಬಳಕೆಯಾಗುವ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ದೆಹಲಿಯಲ್ಲಿ ಬಳಸಲಾಗಿತ್ತು. ಮುಂದಿನ ವರ್ಷದಿಂದ ದೇಶದ ಎಲ್ಲಾ ಪ್ರಮುಖ ಪ್ರವೇಶ ಪರೀಕ್ಷೆಗಳಲ್ಲಿ ಫೇಸ್ ರೆಕಗ್ನಿಷನ್ ವ್ಯವಸ್ಥೆ ಪರಿಚಯಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಲಾಗಿದೆ.

