ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಭವಿಷ್ಯ ಇಂದು ನಿರ್ಧಾರವಾಗಲಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಅರ್ಜಿ ಸಂಬಂಧ ಇಂದು ನ್ಯಾಯಾಲಯ ಆದೇಶ ನೀಡಲಿದೆ. ಆದೇಶ ಕಾಯ್ದಿರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿ ರಿಪೋರ್ಟ್ ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂಬುದರ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಲಿದೆ.
ಬಿ ರಿಪೋರ್ಟ್ ತಿರಸ್ಕರಿಸಿದರೆ ತನಿಖೆಗೆ ಮುಂದುವರಿಕೆಗೆ ಆದೇಶಿಸಬಹುದು. ಅಥವಾ ನ್ಯಾಯಾಲಯ ಸ್ವತಃ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಮುಂದಾಗಬಹುದು. ಕಾಗ್ನಿಜೆನ್ಸ್ ಗೆ ಕಾನೂನಿನ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಬಿ ರಿಪೋರ್ಟ್ ತಿರಸ್ಕರಿಸಿದರೆ ಸಿಎಂ ಮತ್ತು ಕುಟುಂಬಕ್ಕೆ ರಿಲೀಫ್ ಸಿಕ್ಕಂತಾಗುತ್ತದೆ ಎನ್ನಲಾಗಿದೆ.

