HomeKarnatakaBIG NEWS : ಆಸ್ತಿ ದಾಖಲೆ ವಂಚನೆ, ಪೋರ್ಜರಿ ತಡೆಗೆ ಮಹತ್ವದ ಕ್ರಮ : ರಾಜ್ಯಾದ್ಯಂತ...

BIG NEWS : ಆಸ್ತಿ ದಾಖಲೆ ವಂಚನೆ, ಪೋರ್ಜರಿ ತಡೆಗೆ ಮಹತ್ವದ ಕ್ರಮ : ರಾಜ್ಯಾದ್ಯಂತ ʻಭೂದಾಖಲೆʼ ಸಂಪೂರ್ಣ ಡಿಜಿಟಲೀಕರಣ

 

ಬೆಂಗಳೂರು : ಆಸ್ತಿ ದಾಖಲೆ ವಂಚನೆ, ಪೋರ್ಜರಿ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಭೂದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಾದ್ಯಂತ ಭೂದಾಖಲೆ ಸಂಪೂರ್ಣ ಡಿಜಿಟಲೀಕರಣಕ್ಕಾಗಿ ಸರ್ಕಾರ ಸಿದ್ದತೆ ನಡೆಸಿದ್ದು, ಈ ಮೂಲಕ  ಸಾರ್ವಜನಿಕರು ಅವಶ್ಯಕ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲಿದೆ.

ಜನವರಿ ಮೊದಲ ವಾರದಿಂದ ರಾಜ್ಯದ ಎಲ್ಲಾ ರೆಕಾರ್ಡ್‌ ರೂಂಗಳನ್ನು ಡಿಜಿಟಲೈಟ್‌ ಮಾಡಿ ಭೂದಾಖಲೆಗಳೊಂದಿಗೆ ಮಾಲೀಕರ ಆಧಾರ್‌ ಜೋಡಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಅಇಜಿಟಲ್‌ ಇಂಡಿಯಾ ಭೂದಾಖಲೆಗಳ ಆಧುನೀಕರಣ ಕಾರ್ಯಕ್ರಮದಡಿ ಕಂದಾಯ ಇಲಾಖೆ ಕೈಗೊಂಡಿರುವ ಈ ಯೋಜನೆಯಡಿ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ೨೩೬ ತಾಲೂಕು ಕಚೇರಿ ರೆಕಾರ್ಡ್‌ ರೂಂಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular