ಬೆಂಗಳೂರು: ದ್ವೇಷ ಭಾಷಣ ತಡೆ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅಂಕಿತ ಹಾಕಿಲ್ಲ. ರಾಜ್ಯಪಾಲರು ಇನ್ನೂ ಕಡತಕ್ಕೆ ಸಹಿ ಹಾಕಿಲ್ಲದ ಕಾರಣ ದ್ವೇಷ ಭಾಷಣ ತಡೆ ಮಸೂದೆ ರಾಜ್ಯಪಾಲರ ಪರಿಶೀಲನೆಯಲ್ಲಿ ಇದೆ.
ಎಸ್.ಸಿ. ಒಳ ಮೀಸಲಾತಿ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದು, ಮಸೂದೆ ಕುರಿತಾಗಿ ಹೆಚ್ಚಿನ ಸ್ಪಷ್ಟೀಕರಣ ಕೋರಿದ್ದಾರೆ. ಅದೇ ರೀತಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಬಿಲ್ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣ ಕೋರಿ ರಾಜ್ಯಪಾಲರು ಸರ್ಕಾರಕ್ಕೆ ಮಸೂದೆ ವಾಪಸ್ ಕಳುಹಿಸಿದ್ದಾರೆ.
ಉಳಿದ ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ರಾಜಪಾಲರಿಗೆ ಒಟ್ಟು 22 ವಿಧೇಯಕಗಳನ್ನು ಸರ್ಕಾರ ಕಳುಹಿಸಿತ್ತು. ಅನುಮೋದನೆಗಾಗಿ ಸರ್ಕಾರ ಕಳುಹಿಸಿದ್ದ 22 ವಿಧೇಯಕಗಳಲ್ಲಿ 19 ವಿದೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಅನುಮೋದನೆಯಾದ 19 ವಿಧೇಯಕಗಳನ್ನು ಗೆಜೆಟ್ ನಲ್ಲಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

