BIG NEWS : ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ಅರಿವು ಕೇಂದ್ರಗಳ ವಿಸ್ತರಣೆ

ಬೆಂಗಳೂರು : ಹಳ್ಳಿಗಳು ಇಂದು ಜ್ಞಾನದ ಶಕ್ತಿ ಕೇಂದ್ರಗಳಾಗುತ್ತಿವೆ. ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸುವ, ಅರಿವಿನ ಬೆಳಕನ್ನು ಹೆಚ್ಚಿಸುವ ಪುಸ್ತಕಗಳು ಮನೆಬಾಗಿಲಿಗೆ ತಲುಪುತ್ತಿವೆ. ಗ್ರಾಮೀಣ ಮಟ್ಟದಲ್ಲಿ ಜ್ಞಾನಾರ್ಜನೆಗೆ ಸವಲತ್ತುಗಳ ಕೊರತೆ ನೀಗುತ್ತಿದೆ. ಓದಿನ ಅವಕಾಶಗಳಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ ಮಾಹಿತಿ ಕಣಜವೇ ದೊರಕುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದು ಸಾಧ್ಯವಾಗುತ್ತಿರುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅರಿವು ಕೇಂದ್ರಗಳಿಂದ. ಗ್ರಾಮೀಣ ಭಾಗದಲ್ಲಿ 6,599 ಹೊಸ ಗ್ರಂಥಾಲಯಗಳ ಸ್ಥಾಪನೆಯೊಂದಿಗೆ ಅರಿವು ಕೇಂದ್ರಗಳು ಮತ್ತಷ್ಟು ವಿಸ್ತಾರಗೊಳ್ಳುತ್ತಿವೆ. ಅರಿವು ಕೇಂದ್ರಗಳಿಂದ ಉಂಟಾಗುತ್ತಿರುವ ಪ್ರಯೋಜನ, ಯಶೋಗಾಥೆಗಳಿಂದ ಸ್ಫೂರ್ತಿ ಪಡೆದ ಜನರು ತಮ್ಮ ಹಳ್ಳಿಗಳಲ್ಲಿಯೂ ಇಂತಹ ಜ್ಞಾನ ಭಂಡಾರದ ಸ್ಥಾಪನೆಗಾಗಿ ಬೇಡಿಕೆ ಇರಿಸುತ್ತಿದ್ದಾರೆ. ಜನರ ಮನವಿಗಳಿಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಹಾಗೂ ಯುಪಿಎಸ್ ವ್ಯವಸ್ಥೆಯ ಖರೀದಿಗಾಗಿ ಅನುದಾನ ಮಂಜೂರು ಮಾಡಲಾಗಿದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ಗ್ರಂಥಾಲಯಗಳು ದಿನಪತ್ರಿಕೆ ಓದಲು ಸೀಮಿತವಾಗಿಲ್ಲ. ಅವು ಡಿಜಿಟಲ್ ಸ್ವರೂಪ ಪಡೆದಿವೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಈ ಗ್ರಂಥಾಲಯಗಳನ್ನು ಬಳಸಿಕೊಂಡು ಜನರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಜ್ಞಾನ ದೀವಿಗೆ ಬೆಳಗಿಸುವ ಈ ಕೇಂದ್ರಗಳು ಭವಿಷ್ಯದ ಪ್ರಬುದ್ಧ ಪ್ರಜೆಗಳನ್ನು ರೂಪಿಸುವ ವೇದಿಕೆಯಾಗಿ ಹೊರಹೊಮ್ಮುತ್ತಿವೆ. ಮಕ್ಕಳ ಅಧ್ಯಯನಕ್ಕೆ ಪೂರಕವಾದ ಪುಸ್ತಕಗಳು, ತಾಂತ್ರಿಕ ತಿಳಿವಳಿಕೆಗೆ ಅಗತ್ಯವಾದ ಕಂಪ್ಯೂಟರ್ ಸೌಲಭ್ಯಗಳು ಗ್ರಾಮೀಣ ಮಟ್ಟದಲ್ಲಿ ಕ್ರಾಂತಿ ಮೂಡಿಸುತ್ತಿವೆ. ಹಳ್ಳಿ ಹಳ್ಳಿಗೂ ಈ ಯೋಜನೆಯನ್ನು ತಲುಪಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಗುರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read