HomeKarnatakaBIG NEWS : ಕಲಬುರಗಿ ಜಿಲ್ಲೆಯ 11 ಲಕ್ಷ ಮಂದಿಗೆ ನೇತ್ರ ಪರೀಕ್ಷೆ, ಉಚಿತ ಕನ್ನಡಕ...

BIG NEWS : ಕಲಬುರಗಿ ಜಿಲ್ಲೆಯ 11 ಲಕ್ಷ ಮಂದಿಗೆ ನೇತ್ರ ಪರೀಕ್ಷೆ, ಉಚಿತ ಕನ್ನಡಕ ವಿತರಣೆ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಆರೈಕೆ ಸೇವೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಜೈಸ್ ಇಂಡಿಯಾ (ZEISS India) ಸಂಸ್ಥೆಯೊಂದಿಗೆ ಕರ್ನಾಟಕ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯ 11 ಲಕ್ಷ ಮಂದಿಗೆ ನೇತ್ರ ಪರೀಕ್ಷೆ ನಡೆಸಲಾಗುವುದಲ್ಲದೆ, ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸುವ ವಿದ್ಯಾದೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಒಡಂಬಡಿಕೆಯ ಅನುಸಾರ ಕಲಬುರಗಿ ಜಿಲ್ಲೆಯಲ್ಲಿ 5,32,000 ಶಾಲಾ ಮಕ್ಕಳಿಗೆ ಕಣ್ಣಿನ ಪರೀಕ್ಷೆ ಅಭಿಯಾನವನ್ನು ನಡೆಸಲಾಗುವುದು. ಕಲಬುರಗಿ ಜಿಲ್ಲೆಯಾದ್ಯಂತ ಮಕ್ಕಳ ದೃಷ್ಟಿ-ಸಂಬಂಧಿತ ಸಮಸ್ಯೆಗಳನ್ನು ಪತ್ತೆಹಚ್ಚಿ ಅಗತ್ಯವಿರುವವರಿಗೆ ಕನ್ನಡಕಗಳನ್ನು ವಿತರಿಸಲಾಗುವುದು.ಈ ಯೋಜನೆಯು ಮಕ್ಕಳ ಕಣ್ಣಿನ ಆರೋಗ್ಯ ಸುಧಾರಿಸುವ ಗುರಿಯನ್ನು ಹೊಂದಿದ್ದು, ಜೈಸ್ ಇಂಡಿಯಾ ಸಂಸ್ಥೆಯು ವಿದ್ಯಾದೃಷ್ಟಿ ಕಾರ್ಯಕ್ರಮದಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಅಲೋಕ ಸಂಚಾರಿ ವಾಹನದ ಮೂಲಕ ನೇತ್ರ ಪರೀಕ್ಷೆಯನ್ನು ಕೈಗೊಳ್ಳಲಾಗುವುದು. ಇದಲ್ಲದೆ, ನೇತ್ರತಜ್ಞರು (ಆಪ್ಟೋಮೆಟ್ರಿಸ್ಟ್ಗಳು) ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಅವರ ವೃತ್ತಿಪರತೆಯನ್ನು ಹೆಚ್ಚಿಸಲಾಗುತ್ತದೆ.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ತುರ್ತು ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜೈಸ್ ಇಂಡಿಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದ ಮಕ್ಕಳ ಕಣ್ಣಿನ ಆರೋಗ್ಯ ಸುಧಾರಿಸಿ ಕಲಿಕೆಯನ್ನು ಸುಗಮಗೊಳಿಸುವ ಗುರಿ ಹೊಂದಿದ್ದೇವೆ. ಇದರಡಿ ಕಲಬುರಗಿಯಲ್ಲಿ 5.32 ಲಕ್ಷ ಶಾಲಾ ಮಕ್ಕಳಿಗೆ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿರುವ ಕನ್ನಡಕ ವಿತರಿಸಲಾಗುತ್ತದೆ. ಹೆಚ್ಚುವರಿಯಾಗಿ 6,00,000 ಬಡ ವಯಸ್ಕರಿಗೂ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. ಇಂಥ ವಿಶಿಷ್ಟ ಯೋಜನೆಗೆ ಕೈಜೋಡಿಸಿರುವ ಜೈಸ್ ಇಂಡಿಯಾ ಸಂಸ್ಥೆಯನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular