HomeKarnatakaBIG NEWS: ಎಲ್ಲಾ ತಾಲ್ಲೂಕುಗಳಿಗೂ ‘ಅಕ್ಕ ಪಡೆ’ ವಿಸ್ತರಣೆ

BIG NEWS: ಎಲ್ಲಾ ತಾಲ್ಲೂಕುಗಳಿಗೂ ‘ಅಕ್ಕ ಪಡೆ’ ವಿಸ್ತರಣೆ

ಮಹಿಳೆಯರ ಶಕ್ತಿ, ಸ್ವಾಭಿಮಾನದ ಪ್ರತೀಕವಾದ ‘ಅಕ್ಕ ಪಡೆ’ಯನ್ನು ಶೀಘ್ರವೇ ತಾಲೂಕು ಮಟ್ಟಕ್ಕೆ ವಿಸ್ತರಿಸಲಾಗುವುದು. ಈ ಬಗ್ಗೆ ಮುಂದಿನ ಬಜೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಿಳಿಸಿದ್ದಾರೆ.

ಸದ್ಯ 31 ಎಸ್‌ಪಿ ಕಚೇರಿಗಳು, ಐದು ಪೊಲೀಸ್‌ ಕಮಿಷನರೇಟ್‌ ಸೇರಿ 36 ಕಡೆ ಅಕ್ಕ ಪಡೆ ಆರಂಭಿಸಿದ್ದೇವೆ. ಉತ್ತಮ ಸ್ಪಂದನೆ ಇದೆ. ಮುಂದಿನ ಬಜೆಟ್ ನಲ್ಲಿ ಅಂಗೀಕಾರ ಪಡೆದುಕೊಂಡು ರಾಜ್ಯದ ಎಲ್ಲಾ ತಾಲೂಕುಗಳಿಗೂ ಅಕ್ಕಪಡೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ಅಕ್ಕಪಡೆಯಲ್ಲಿ ಗೃಹರಕ್ಷಕ ದಳದ ನಾಲ್ವರು ಮಹಿಳೆಯರು, ಇಬ್ಬರು ಮಹಿಳಾ ಪೊಲೀಸರು, ಒಬ್ಬರು ಚಾಲಕರು ಸೇರಿ ಏಳು ಮಂದಿ ಇರುತ್ತಾರೆ. ಕಮಾಂಡೋ ಸಮವಸ್ತ್ರ ಧರಿಸುತ್ತಾರೆ. ಮಹಿಳೆಯರ ರಕ್ಷಣೆಗೆ ಅಗತ್ಯ ಸಾಮರ್ಥ್ಯ ವೃದ್ಧಿಗೆ ಅವರಿಗೆ ತರಬೇತಿ ನೀಡಲಾಗಿದೆ. ಮಹಿಳೆಯರಿಗೆ ತೊಂದರೆಯಾದ ಬಗ್ಗೆ ಕರೆ ಬಂದ ಕೂಡಲೇ ಈ ಅಕ್ಕಪಡೆ ಕಾರ್ಯ ಪ್ರವೃತ್ತವಾಗಲಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular