HomeLatest NewsBIG NEWS : ನಟ 'ರಿಷಬ್ ಶೆಟ್ಟಿ' ತೊಡೆ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ ನರ್ತಕ' :...

BIG NEWS : ನಟ ‘ರಿಷಬ್ ಶೆಟ್ಟಿ’ ತೊಡೆ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ ನರ್ತಕ’ : ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ |WATCH VIDEO

ಬೆಂಗಳೂರು : ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಶುರು ಮಾಡಿದಾಗಿನಿಂದಲೂ ಹಲವು ಪರ ವಿರೋಧ ಟೀಕೆಗಳು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಅವರು ಮಂಗಳೂರಿನಲ್ಲಿ ಹರಕೆ ಕೋಲ ಮಾಡಿಸಿದ್ದರು. ಈ ವೇಳೆ ರಿಷಬ್ ಕಾಲ ಮೇಲೆ ದೈವಾರಾಧಕ ಮಲಗಿದ್ದು ಚರ್ಚೆಗೆ ಕಾರಣವಾಗಿದೆ.

ನಟ ರಿಷಬ್ ಶೆಟ್ಟಿ ತೊಡೆ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ, ನರ್ತಕ
ನಟ ರಿಷಬ್ ಶೆಟ್ಟಿ ತೊಡೆ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ, ನರ್ತಕ ಅಂತ ಸೋಶಿಯಲ್ ಮೀಡಿಯಾದಲ್ಲಿ ಹಲವರು ಟೀಕೆ ಮಾಡುತ್ತಿದ್ದಾರೆ. ಹರಕೆ ಕೋಲ ದೈವರಾಧನೆ ನಿಯಮಗಳ ವಿರುದ್ಧ ನಡೆಯಿತು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಂಗಳೂರಿನ ಬಾರೆಬೈಲ್ ನಲ್ಲಿ ಹರಕೆ ಕೋಲ ನಡೆಯಿತು. ಈ ಸಂದರ್ಭದಲ್ಲಿ ದೈವ ನರ್ತಕ ರಿಷಬ್ ಕಾಲ ಮೇಲೆ ಮಲಗಿದ್ದರು. ಕೋಲದ ವೇಳೆ ದೈವ ನರ್ತಕ್ ರಿಷಬ್ ಜೊತೆ ವರ್ತಿಸಿದ ಬಗ್ಗೆ ಟೀಕೆಗಳು ಕೇಳಿ ಬರ್ತಿದೆ.
ನರ್ತಕ ಹಾಕಿದ ಬಟ್ಟೆಗಳು ದೈವರಾಧನೆಗೆ ವಿರುದ್ಧವಾಗಿದೆ. ಕಡ್ತಳೆಯನ್ನ ತಲೆಗೆ ಹೊಡೆದುಕೊಳ್ಳುವುದಿಲ್ಲ . ಡ್ಯಾನ್ಸರ್ ಗಳು ಹಾಕುವ ಬಟ್ಟೆ ಹಾಕಬಾರದು ಎಂದು ದೈವಾರಾಧಕ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular