ಬೆಂಗಳೂರು : ಬೆಂಗಳೂರಲ್ಲಿ ಕಿಡಿಗೇಡಿಯೋರ್ವ ಪಾಕಿಸ್ತಾನದ ಬಾವುಟ ಇರುವ ಟೀ ಶರ್ಟ್ ಧರಿಸಿದ್ದು, ವೀಡಿಯೋ ವೈರಲ್ ಆಗಿದೆ.
ಕಿಡಿಗೇಡಿ ಪಾಕಿಸ್ತಾನದ ಬಾವುಟ ಇರುವ ಟೀ ಶರ್ಟ್ ಧರಿಸಿ ಬೈಕ್ ನಲ್ಲಿ ಹೋಗುತ್ತಿರುವುದನ್ನು ವಾಹನ ಸವಾರರೊಬ್ಬರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಬಸವನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಶತ್ರು ರಾಷ್ಟ್ರವನ್ನು ಭಾರತೀಯ ಪ್ರಜೆ ಎಂದು ಹೊಗಳುವುದು ನಮ್ಮ ರಾಷ್ಟ್ರಕ್ಕೆ ಮಾಡುವ ನೇರ ಅವಮಾನ. ಈ ವ್ಯಕ್ತಿ ಕಾಶ್ಮೀರದಲ್ಲಿ ಪಾಕಿಸ್ತಾನ ಧ್ವಜವನ್ನು ಹೊತ್ತ ಟಿ-ಶರ್ಟ್ ಧರಿಸಿರುವುದು ಕಂಡುಬಂದಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ವಿಶ್ವಾಸಘಾತುಕ ಕೃತ್ಯ. ಇಂತಹ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ನಾನು ಪೊಲೀಸರನ್ನು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

