HomeKarnatakaBIG NEWS: 6 ವರ್ಷದ ಪ್ರೀತಿ; ಏಕಾಏಕಿ ನಿರಾಕರಿಸಿದ ಯುವತಿ; ನೊಂದ ಯುವಕ ಆತ್ಮಹತ್ಯೆ

BIG NEWS: 6 ವರ್ಷದ ಪ್ರೀತಿ; ಏಕಾಏಕಿ ನಿರಾಕರಿಸಿದ ಯುವತಿ; ನೊಂದ ಯುವಕ ಆತ್ಮಹತ್ಯೆ

ಬೆಂಗಳೂರು; ಇಲ್ಲೊಂದು ಜೋಡಿ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸಿ ಈಗ ಯುವತಿ ಏಕಾಏಕಿ ಪ್ರೀತಿ ನಿರಾಕರಿಸಿ ಬ್ರೇಕಪ್ ಎಂದಿದ್ದಾಳೆ. ಮನ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಉಳ್ಳಾಲ ಉಪನಗರದಲ್ಲಿ ನಡೆದಿದೆ.

ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ 6 ವರ್ಷಗಳಿಂದ ರೋಹಿತ್ ಕಾಲೇಜು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿಯೂ ರೋಹಿತ್ ನನ್ನು ಪ್ರೀತಿಸಿದ್ದಳು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಯುವತಿ 6 ವರ್ಷದ ಪ್ರೀತಿಗೆ ಕೊನೆ ಹಾಡಿದ್ದಾಳೆ. ಬ್ರೇಕಪ್ ಮಾಡಿಕೊಳ್ಳೋಣ ಎಂದು ಹೇಳಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾತನಾಡುವುದನ್ನೇ ನಿಲ್ಲಿಸಿದ್ದಳು. ಕಾಲೇಜು ಬಳಿ ಹೋಗಿ ರೋಹಿತ್ ಮಾತನಾಡಲು ಯತ್ನಿಸಿದ್ದರೂ ಆಕೆ ಮಾತನಾಡಿರಲಿಲ್ಲ. ಇದರಿಂದ ಮನನೊಂದ ಯುವಕ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular