HomeKarnatakaBIG NEWS: ಸಿಡಿ ಕೇಸ್ ನಲ್ಲಿ ಮಹಾನಾಯಕನ ಕೈವಾಡ; ಆಡಿಯೋ ಬಿಡುಗಡೆಗೆ ಮುಂದಾದ್ರ ರಮೇಶ್ ಜಾರಕಿಹೊಳಿ...

BIG NEWS: ಸಿಡಿ ಕೇಸ್ ನಲ್ಲಿ ಮಹಾನಾಯಕನ ಕೈವಾಡ; ಆಡಿಯೋ ಬಿಡುಗಡೆಗೆ ಮುಂದಾದ್ರ ರಮೇಶ್ ಜಾರಕಿಹೊಳಿ ? ಕುತೂಹಲ ಮೂಡಿಸಿದ ಸುದ್ದಿಗೋಷ್ಠಿ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆಸಲಿರುವ ಸುದ್ದಿಗೋಷ್ಠಿ ಬಗ್ಗೆ ಕುತೂಹಲ ತೀವ್ರಗೊಂಡಿದೆ. ಅಂದಿನ ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಆಡಿಯೋ ಬಾಂಬ್ ಸಿಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ 10:30 ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ರಮೇಶ್ ಜಾರಕಿಹೊಳಿ, ಮಹಾನಾಯಕನಿಗೆ ಸಂಬಂಧಿಸಿದ ಆಡಿಯೋ ದಾಖಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಂದಿನ ಸಿಡಿಗೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು ಎಂದು ಜಾರಕಿಹೊಳಿ ಆರೋಪಿಸಿದ್ದಾರೆ.

ಸಿಡಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿರುವ ರಮೇಶ್ ಜಾರಕಿಹೊಳಿ, ಡಿಕೆಶಿ ಬಗ್ಗೆಯೂ ಹೊಸ ಬಾಂಬ್ ಸಿಡಿಸುವ ಸಾಧ್ಯತೆ ಇದೆ. ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಿಡಿ, ಆಡಿಯೋ ಬಾಂಬ್ ಗಳು ಮುನ್ನೆಲೆಗೆ ಬಂದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular