HomeIndiaBIG NEWS:‌ ವಾಟ್ಸಾಪ್‌ ಪರಿಚಯಿಸಿದೆ ಹೊಸ ಫೀಚರ್‌; ತಂತಾನೇ ʼಮ್ಯೂಟ್‌ʼ ಆಗಲಿದೆ ಅಜ್ಞಾತ ಸಂಖ್ಯೆಗಳಿಂದ ಬರುವ ಸ್ಪ್ಯಾಮ್‌...

BIG NEWS:‌ ವಾಟ್ಸಾಪ್‌ ಪರಿಚಯಿಸಿದೆ ಹೊಸ ಫೀಚರ್‌; ತಂತಾನೇ ʼಮ್ಯೂಟ್‌ʼ ಆಗಲಿದೆ ಅಜ್ಞಾತ ಸಂಖ್ಯೆಗಳಿಂದ ಬರುವ ಸ್ಪ್ಯಾಮ್‌ ಕರೆ..!

ವಾಟ್ಸಾಪ್‌ನಲ್ಲಿ ಅಜ್ಞಾತ ಸಂಖ್ಯೆಗಳಿಂದ ಬರುವ ಸ್ಪ್ಯಾಮ್ ಕರೆಗಳು ಹೆಚ್ಚುತ್ತಲೇ ಇವೆ. ವಂಚಕರು ಇಂತಹ ಕರೆಗಳ ಮೂಲಕ ಬಳಕೆದಾರರಿಗೆ ಮೋಸ ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇಂತಹ ಕರೆಗಳನ್ನು ನಿರ್ಬಂಧಿಸಲು ಮೆಟಾ ಹೊಸ ಫೀಚರ್‌ ಅನ್ನು ಅಭಿವೃದ್ಧಿಪಡಿಸಿದೆ.

ಈ ಫೀಚರ್‌ ಮೂಲಕ ಬಳಕೆದಾರರು ಅಂತಹ ಕರೆಗಳನ್ನು ವಾಟ್ಸಾಪ್‌ನಲ್ಲಿ ಸ್ವಯಂಚಾಲಿತವಾಗಿ ಮ್ಯೂಟ್ ಮಾಡಬಹುದು. ಈ ಹೊಸ ಫೀಚರ್‌ನಿಂದಾಗಿ WhatsApp ಬಳಕೆದಾರರ ಖಾಸಗಿತನಕ್ಕೆ ಇನ್ನಷ್ಟು ಭದ್ರತೆ ಒದಗಿಸಿದಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವನ್ನು ಸಹ ಇದು ನೀಡುತ್ತದೆ. ಸದ್ಯ ಈ ಫೀಚರ್‌ ಪ್ರಾಯೋಗಿಕ ಹಂತದಲ್ಲಿದೆ. ಸ್ಥಿರ ಆವೃತ್ತಿಯು ಈಗ Android ಮತ್ತು iOS ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯವಿದೆ. ಪ್ರೈವೆಸಿ ಸೆಟ್ಟಿಂಗ್‌ಗಳ ಮೆನು ಮೂಲಕ ಇದನ್ನು ಸಕ್ರಿಯಗೊಳಿಸಬಹುದು. ನಂತರ ವಾಟ್ಸಾಪ್‌ ಸ್ವಯಂಚಾಲಿತವಾಗಿ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸೈಲೆನ್ಸ್‌ ಮಾಡುತ್ತದೆ. ಈ ಫೀಚರ್‌ನ ಲಾಭ ಪಡೆಯಲು ನಿಮ್ಮ ಫೋನ್‌ನಲ್ಲಿ WhatsAppನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದನ್ನು Google Play Store ಅಥವಾ Apple App Store ಮೂಲಕ ನವೀಕರಿಸಿ.

ಈ ಫೀಚರ್‌ ಅನ್ನು ಆಕ್ಟಿವ್‌ ಮಾಡಿಕೊಳ್ಳಲು WhatsApp ಓಪನ್‌ ಮಾಡಿ. ಮೇಲಿನ ಬಲ ಮೂಲೆಯಲ್ಲಿರುವ ಮೆನುವಿನ ಮೇಲೆ ಕ್ಲಿಕ್ ಮಾಡಿ. ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಪ್ರೈವೆಸಿ ಆಪ್ಷನ್‌ ಮೇಲೆ ಕ್ಲಿಕ್‌ ಮಾಡಿ, ಕರೆಗಳನ್ನು ಆಯ್ಕೆ ಮಾಡಿ. ಬಳಕೆದಾರರಿಗಾಗಿ ವಾಟ್ಸಾಪ್‌ ಪ್ರತಿವಾರ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಕಂಪನಿಯು ಇತ್ತೀಚೆಗೆ ಆಯ್ದ ಮಾರುಕಟ್ಟೆಗಳಲ್ಲಿ WhatsApp ಚಾನೆಲ್‌ಗಳನ್ನು ಪರಿಚಯಿಸಿತು. ಕಳುಹಿಸಿದ ಸಂದೇಶಗಳನ್ನು 15 ನಿಮಿಷಗಳವರೆಗೆ ಎಡಿಟ್‌ ಮಾಡುವ ಆಪ್ಷನ್‌ ಅನ್ನು ಕೂಡ ನೀಡಿದೆ.

For Latest News Updates, Join Our Whatsapp Community🚩
RELATED ARTICLES

Most Popular