HomeKarnatakaBIG NEWS: ಬ್ಲ್ಯಾಕ್ ಮೇಲ್ ಮಾಡಿ ಬಿಜೆಪಿ ಟಿಕೆಟ್ ಪಡೆದ ಆರೋಪ; ದೇವಸ್ಥಾನಕ್ಕೆ ಬಂದು ಆಣೆ...

BIG NEWS: ಬ್ಲ್ಯಾಕ್ ಮೇಲ್ ಮಾಡಿ ಬಿಜೆಪಿ ಟಿಕೆಟ್ ಪಡೆದ ಆರೋಪ; ದೇವಸ್ಥಾನಕ್ಕೆ ಬಂದು ಆಣೆ ಮಾಡಿ ಸಾಬೀತು ಪಡಿಸಲಿ ಎಂದು ಜೆಡಿಎಸ್ ಅಭ್ಯರ್ಥಿಗೆ ಸವಾಲು ಹಾಕಿದ ಸಂಸದ ಸಂಗಣ್ಣ ಕರಡಿ

ಕೊಪ್ಪಳ: ವಿಧಾನಸಭಾ ಚುನಾವಣೆ ಅಖಾಡದಲ್ಲಿ ಆಣೆ ಪ್ರಮಾಣದ ಮಾತುಗಳು ಕೆಳಿಬಂದಿದ್ದು, ಬಿಜೆಪಿಗೆ ಬ್ಲ್ಯಾಕ್ ಮೇಲ್ ಮಾಡಿ ಸೊಸೆಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ವಿರುದ್ಧ ಆರೋಪ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್ ಗೆ ಸಂಸದರು ಬಹಿರಂಗ ಸವಾಲು ಹಾಕಿದ್ದಾರೆ.

ಬ್ಲ್ಯಾಕ್ ಮೇಲ್ ಮಾಡಿ ಟಿಕೆಟ್ ಪಡೆದಿದ್ದಾಗಿ ಜೆಡಿಎಸ್ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್ ಆರೋಪಿಸಿರುವುದು ಸರಿಯಲ್ಲ. ಸಿ.ವಿ. ಚಂದ್ರಶೇಖರ್ ಲೂಟಿಕೋರ, ಜನರ ಹಣ ಕೊಳ್ಳೆ ಹೊಡೆದು ಚುನಾವಣೆ ಮಾಡಿದ್ದಾರೆ. ಸರ್ಕಾರಿ ನೌಕರರಾಗಿ ಇಷ್ಟು ದುಡ್ಡು ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ನಾನು ಬ್ಲ್ಯಾಕ್ ಮೇಲ್ ಮಾಡಿ ಬಿಜೆಪಿ ಟಿಕೆಟ್ ತಂದಿದ್ದೇನೆ ಎಂದು ಆರೋಪಿಸಿರುವ ಸಿ.ವಿ. ಚಂದ್ರಶೇಖರ್, ಹುಲಿಗೆಮ್ಮ ದೇವಸ್ಥಾನಕ್ಕೆ ಬಂದು ಆಣೆ-ಪ್ರಮಾಣ ಮಾಡಿ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular