ವಿಜಯನಗರ: ಬಿರುಗಾಳಿ, ಮಳೆ ಆರಭಟದ ನಡುವೆ ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬಂಡೆಬಸಾಪುರದಲ್ಲಿ ನಡೆದಿದೆ.
ಪಾಂಡುನಾಯ್ಕ್ (18) ಮೃತ ಯುವಕ. ನಿನ್ನೆ ಸಂಜೆ ಭಾರಿ ಮಳೆ ವೇಳೆ ಯುವಕ ಮನೆ ಬಳಿ ನಿಂತಿದ್ದ. ಈ ವೇಳೆ ಏಕಾಏಕಿ ಸಿಡಿಲು ಅಪ್ಪಳಿಸಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸೊಡಿಲ ಹೊಡೆತಕ್ಕೆ ಮನೆ ಗೋಡೆ ಹಾನಿಯಾಗಿದೆ. ಕೂಡ್ಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.