HomeCrimeBIG NEWS: ಪತ್ನಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನೇ ಕೊಂದ ತಂದೆ

BIG NEWS: ಪತ್ನಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನೇ ಕೊಂದ ತಂದೆ

ರಾಯಚೂರು: ಪತ್ನಿ ಶೀಲ ಶಂಕಿಸಿ ಇಬ್ಬರು ಪುಟ್ಟ ಮಕ್ಕಳ ಕತ್ತು ಹಿಸುಕಿ ತಂದೆಯೇ ಮಕ್ಕಳನ್ನು ಕೊಂದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಜಕ್ಕಲದೊಡ್ದಿ ಗ್ರಾಮದಲ್ಲಿ ನಡೆದಿದೆ.

ಶಿವರಾಜ್ (5) ಹಾಗೂ ರಾಜು (3) ತಂದೆಯಿಂದಲೇ ಕೊಲೆಯಾದ ಮಕ್ಕಳು. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಕ್ಕಲದೊಡ್ದಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪತ್ನಿ ಪ್ರಭಾವತಿ ಮೇಲೆ ಅನುಮಾನಪಡುತ್ತಿದ್ದ ಪತಿ ನಿಂಗಪ್ಪ, ನಿನ್ನೆ ಮಕ್ಕಳಿಬ್ಬರನ್ನು ಅಜ್ಜ-ಅಜ್ಜಿಯನ್ನು ಭೇಟಿಯಾಗಲು ಕರೆದೊಯ್ಯುವುದಾಗಿ ಹೇಳಿ ಕರೆದೊಯ್ದು ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಆರೋಪಿ ನಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular