
ಕೋಲಾರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಜೆಡಿಎಸ್ ಜೊತೆಗಿನ ಕಾಂಗ್ರೆಸ್ ಅನೈತಿಕ ಸಂಬಂಧಕ್ಕೆ ಬೇಸತ್ತು ನಾವು ಬಿಜೆಪಿಗೆ ಹೋಗಿದ್ದು. ಹಣದ ಆಸೆಯಿಂದ ಬಿಜೆಪಿ ಸೇರಿಲ್ಲ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಲ್ಲಿ ಮೂರು ಸಾವಿರ ಕೋಟಿ ಹಗರಣ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆರೋಗ್ಯ ಇಲಾಖೆಯ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಕೊಡುತ್ತೇನೆ. ಸಿಎಜಿ ವರದಿ ಏನು ಉಲ್ಲೇಖ ಮಾಡಿದೆ ಎಂಬುದನ್ನೂ ನಾಳೆ ಹೇಳುತ್ತೇನೆ. ನಾನು ಹಗರಣ ಮಾಡಿದ್ದರೆ ಪಬ್ಲಿಕ್ ನಲ್ಲಿ ನೇಣಿಗೆ ಹಾಕಿ ಎಂದು ತಿರಿಗೇಟು ನೀಡಿದರು.

