
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ಇದು ಲಾಟರಿ ಸರ್ಕಾರ, ಲಾಟರಿಯಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಬಿಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆಗೂ ಮುನ್ನ ಗ್ಯಾರಂಟಿ ಭರವಸೆಗಳನ್ನು ನೀಡಿ ಎಲ್ಲರಿಗೂ ಫ್ರೀ ಫ್ರೀ ಎಂದು ಘೋಷಿಸಿದರು. ನನ್ನ ಹೆಂಡತಿಗೂ ಫ್ರೀ ಅಂತ ಸಿದ್ದರಾಮಯ್ಯನವರು ಹೇಳಿದ್ರು. ಶೋಭಕ್ಕ ನಿನಗೂ ಫ್ರೀ, ಸಿ.ಟಿ. ರವಿ ನಿನಗೂ ಫ್ರೀ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ರು. ಎಲ್ಲರಿಗೂ ಉಚಿತ ಎಂದವರು ಈಗ ಷರತ್ತುಗಳನ್ನು ಯಾಕೆ ಹಾಕುತ್ತಿದ್ದಾರೆ? ಎಲ್ಲರಿಗೂ ಉಚಿತ ಯೋಜನೆ ಕೊಡಲಿ ಎಂದು ಗುಡುಗಿದ್ದಾರೆ.

