HomeKarnatakaBIG NEWS: ಅವನ್ಯಾರು....? ಇವನ್ಯಾರು....? ಎಂಬ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೆಯದು; ಸಿದ್ದರಾಮಯ್ಯಗೆ ಸಚಿವ ಸೋಮಣ್ಣ...

BIG NEWS: ಅವನ್ಯಾರು….? ಇವನ್ಯಾರು….? ಎಂಬ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೆಯದು; ಸಿದ್ದರಾಮಯ್ಯಗೆ ಸಚಿವ ಸೋಮಣ್ಣ ತಿರುಗೇಟು

ಚಾಮರಾಜನಗರ: 2006ರ ಚುನಾವಣೆಯಲ್ಲಿ ಸಿದ್ದರಾಮಯ್ಯಗಾಗಿ ಒದೆ ತಿಂದಿದ್ದೇನೆ. ಬರಿ ಮೈಯಲ್ಲಿ ದೇವಸ್ಥಾನದಿಂದ ಮೈಸೂರಿಗೆ ಹೋಗಿದ್ದೇನೆ. ಅವತ್ತು ಸಿದ್ದರಾಮಯ್ಯನವರಿಗಾಗಿ ಕೆಲಸ ಮಾಡಿದ್ದೆ. ಅದೆಲ್ಲ ಅವರ ತಲೆಯಲ್ಲಿ ಇಲ್ಲ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸೋಮಣ್ಣ ಯಾರು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸೋಮಣ್ಣ, ನಾನು ಸಾಹೇಬ್ರೇ ಅಂತೀನಿ, ಅವರು ಏಕವಚನದಲ್ಲಿ ಮಾತಾಡ್ತಾರೆ. ಈಗ ಅವರು ವಿಪಕ್ಷ ನಾಯಕರೂ ಅಲ್ಲ, ನಾನು ಮಂತ್ರಿಯೂ ಅಲ್ಲ. ನಾನೂ ಅಭ್ಯರ್ಥಿ, ಸಿದ್ದರಾಮಯ್ಯ ಕೂಡ ಅಭ್ಯರ್ಥಿ ಎಂದು ಟಾಂಗ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವನ್ಯಾರು ? ಇವನ್ಯಾರು ಎಂಬ ಡೈಲಾಗ್ ಕಡಿಮೆ ಮಾಡಿದರೆ ಒಳ್ಳೆಯದು. ವರುಣಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತಿರುವುದು ವಿಧಿ ನಿಯಮ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular