HomeKarnatakaBIG NEWS: ಅಂಡರ್ ಪಾಸ್ ನಲ್ಲಿ ಕಾರು ಮುಳುಗಿ ಯುವತಿ ಸಾವು ಪ್ರಕರಣ; ಕಾರು ಚಾಲಕ...

BIG NEWS: ಅಂಡರ್ ಪಾಸ್ ನಲ್ಲಿ ಕಾರು ಮುಳುಗಿ ಯುವತಿ ಸಾವು ಪ್ರಕರಣ; ಕಾರು ಚಾಲಕ ಅರೆಸ್ಟ್

ಬೆಂಗಳೂರು: ವರುಣಾರ್ಭಟಕ್ಕೆ ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಮುಳುಗಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರು ಚಾಲಕ ಹರೀಶ್ ಬಂಧಿತರು. ಪ್ರಕರಣ ಸಂಬಂಧ ಕಾರು ಚಾಲಕ ಹಾಗೂ ಬಿಬಿಎಂಪಿ ಅಧಿಕರಿಗಳ ವಿರುದ್ಧ ಯುವತಿ ಸಹೋದರ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.

ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಮುಳುಗಡೆಯಾಗಿ ಇನ್ ಫೊಸಿಸ್ ಉದ್ಯೋಗಿ 22 ವರ್ಷದ ಯುವತಿ ಭಾನುರೇಖಾ ಮೃತಪಟ್ಟಿದ್ದರು. ಆಂಧ್ರಪ್ರದೇಶ ಮೂಲದ ಭಾನುರೇಖಾ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದರು. ಬೆಂಗಳೂರು ನಗರ ನೋಡಲೆಂದು ಕುಟುಂಬದವರ ಜೊತೆ ಕ್ಯಾಬ್ ಬುಕ್ ಮಾಡಿಕೊಂಡು ಕಾರಿನಲ್ಲಿ ತೆರಳಿದ್ದರು. ಈ ವೇಳೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೆ.ಆರ್. ಸರ್ಕಲ್ ನ ಅಂಡರ್ ಪಾಸ್ ನಲ್ಲಿ ಏಕಾಏಕಿ ನೀರು ತುಂಬಿಕೊಂಡು ಕಾರು ನೀರಿನಲ್ಲಿ ಮುಳುಗಡೆಯಾಗಿ ದುರಂತ ಸಂಭವಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಭಾನುರೇಖಾ ಸಹೋದರ ಕಾರು ಚಾಲಕ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular