ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೀತಿ, ಮದುವೆ ಹಾಗೂ ವೈಯಕ್ತಿಕ ಜೀವನದ ವಿಚಾರಗಳು ಚರ್ಚೆಯಾಗುತ್ತಿವೆ. ಇದೇ ವೇಳೆ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಶ್ರೇಷ್ಠಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಕಾವ್ಯ ಗೌಡ ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ನಡುವೆ ಪ್ರೀತಿಯ ವಿಚಾರವಾಗಿ ಮಾತುಕತೆ ನಡೆಯುತ್ತಿತ್ತು. ಈ ವೇಳೆ ತಾಂಡವ್ ರಾಮ್‌ಗೆ ಇದುವರೆಗೂ ಪ್ರೀತಿ ಆಗಿದೆಯೇ ಎಂದು ಗಗನ್ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತಾಂಡವ್ ರಾಮ್, ತಮ್ಮ ಕಾಲೇಜು ದಿನಗಳಲ್ಲಿ ಪ್ರೀತಿಗಿಂತ ಬಾಡಿ ಬಿಲ್ಡಿಂಗ್ ಹಾಗೂ ಆಂಜನೇಯನ ಧ್ಯಾನದ ಕಡೆ ಹೆಚ್ಚು ಗಮನ ನೀಡಿದ್ದಾಗಿ ಹೇಳಿದ್ದಾರೆ. ತಮ್ಮ ಜೀವನದಲ್ಲಿ ಇದುವರೆಗೂ ಲವ್ ಮಾಡಿಲ್ಲ ಎಂದೂ ತಿಳಿಸಿದ್ದಾರೆ.
ಈ ಮಾತುಕತೆಯಲ್ಲಿ ಕಾವ್ಯ ಗೌಡ ಕೂಡ ಭಾಗಿಯಾಗಿದ್ದಾರೆ. ಆಗ ಜಗ್ಗ ಮಮ್ಮಿ, ಕಾವ್ಯ ಅವರಿಗೆ ಎಷ್ಟು ಬಾರಿ ಪ್ರೀತಿ ಆಗಿದೆ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಕಾವ್ಯ ಗೌಡ, “ನಾನು ಮೂರು ಜನರನ್ನು ಲವ್ ಮಾಡಿದ್ದೀನಿ” ಎಂದು ಹೇಳಿಕೊಂಡಿದ್ದಾರೆ.
ತಾಂಡವ್‌ಗೆ ಪ್ರೀತಿಯಾಗೇ ಆಗಿಲ್ವಂತೆ!
ಬಿಗ್ ಬಾಸ್ ಮನೆಯಲ್ಲಿನ ಕುಚಿಕು ಗೆಳೆಯರಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಪ್ರೀತಿಯ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಗಗನ್, ತಾಂಡವ್‌ಗೆ ಇದುವರೆಗೂ ಪ್ರೀತಿ ಆಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ತಾಂಡವ್ ರಾಮ್, ತಮ್ಮ ಕಾಲೇಜು ದಿನಗಳಲ್ಲಿ ಪ್ರೀತಿಗಿಂತ ಬಾಡಿ ಬಿಲ್ಡಿಂಗ್ ಹಾಗೂ ಆಂಜನೇಯನ ಧ್ಯಾನಕ್ಕೆ ಹೆಚ್ಚು ಗಮನ ನೀಡಿದ್ದಾಗಿ ಹೇಳಿದ್ದಾರೆ. ಜೀವನದಲ್ಲಿ ತಾನು ಲವ್ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕಾವ್ಯ ಎಂಟ್ರಿ.. ಶುರುವಾಯ್ತು ಲವ್ ಮ್ಯಾಟರ್!
ಈ ಮಾತುಕತೆಯ ನಡುವೆ ಕಾವ್ಯ ಗೌಡ ಕೂಡ ಸೇರಿಕೊಂಡಿದ್ದಾರೆ. ತಾಂಡವ್ ಅವರು, ಮೊದಲ ದಿನ ಕಾವ್ಯ ತಮ್ಮೊಂದಿಗೆ ಮಾತನಾಡಿರಲಿಲ್ಲ, ಹೀಗಾಗಿ ಸೌಂದರ್ಯ ಅವರೊಂದಿಗೆ ಮಾತನಾಡಿದ್ದಾಗಿ ತಮಾಷೆಯಾಗಿ ಹೇಳಿದ್ದಾರೆ.
ನಂತರ ಜಗ್ಗ ಮಮ್ಮಿ ಕೂಡ ಮಾತುಕತೆಗೆ ಸೇರಿಕೊಂಡು ಕಾವ್ಯ ಅವರಿಗೆ ಎಷ್ಟು ಬಾರಿ ಪ್ರೀತಿ ಆಗಿದೆ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.
‘ಮೂರು ಜನರನ್ನು ಲವ್ ಮಾಡಿದ್ದೀನಿ’ ಎಂದ ಕಾವ್ಯ
ಜಗ್ಗ ಮಮ್ಮಿ ಕೇಳಿದ ಪ್ರಶ್ನೆಗೆ ಕಾವ್ಯ ಗೌಡ ಯಾವುದೇ ಮುಜುಗರವಿಲ್ಲದೆ, “ನಾನು ಮೂರು ಜನರನ್ನು ಲವ್ ಮಾಡಿದ್ದೀನಿ” ಎಂದು ಹೇಳಿದ್ದಾರೆ.
ಕಾವ್ಯ ಅವರ ಈ ಹೇಳಿಕೆ ಬಿಗ್ ಬಾಸ್ ಮನೆಯಲ್ಲಿನ ಲವ್ ಮ್ಯಾಟರ್ ಚರ್ಚೆಗೆ ಮತ್ತಷ್ಟು ಕುತೂಹಲ ತಂದಿದೆ. ಆದರೆ ಅವರು ಪ್ರೀತಿಸಿದ್ದ ಆ ಮೂವರು ಯಾರು ಎಂಬುದರ ಬಗ್ಗೆ ಈ ಮಾತುಕತೆಯಲ್ಲಿ ಯಾವುದೇ ವಿವರ ನೀಡಿಲ್ಲ. ಸದ್ಯ ‘ಮೂರು ಜನರನ್ನು ಪ್ರೀತಿಸಿದ್ದೀನಿ’ ಎಂಬ ಕಾವ್ಯ ಗೌಡ ಅವರ ಹೇಳಿಕೆ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದ್ದು, ಅವರ ಲವ್ ಲೈಫ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

