HomeLatest NewsBIG NEWS: ರೆಸಾರ್ಟ್ ನ ಈಜುಕೊಳಕ್ಕೆ ಬಿದ್ದು 5 ವರ್ಷದ ಬಾಲಕ ಸಾವು

BIG NEWS: ರೆಸಾರ್ಟ್ ನ ಈಜುಕೊಳಕ್ಕೆ ಬಿದ್ದು 5 ವರ್ಷದ ಬಾಲಕ ಸಾವು

ಭಟ್ಕಳ: ರೆಸಾರ್ಟ್ ನ ಈಜುಕೊಳಕ್ಕೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಜಾಲಿ ಬೀಚ್ ಬಳಿಯ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ. ಮೊಹಮ್ಮದ್ ಮುಸ್ತಕಿಂ ಮೃತ ಬಾಲಕ. ಸ್ಥಳೀಯ ಮದ್ರಸಾ ಶಿಕ್ಷಕ ಮೌಲನಿ ಶಾಹಿದುಲ್ಲಾ ಅವರ ಪುತ್ರ ಎಂದು ಗುರುತಿಸಲಾಗಿದೆ.

ತಾಯಿ ಹಾಗೂ ತಮ್ಮನ ಜೊತೆ ಬಾಲಕ ರೆಸಾರ್ಟ್ ಗೆ ಹೋಗಿದ್ದ. ಈ ವೇಳೆ ಆಟವಾಡುತ್ತಿದ್ದ ಬಾಲಕ ಈಜುಕೊಳಕ್ಕೆ ಬಿದ್ದಿದ್ದಾನೆ. ತಕ್ಷಣ ತಾಯಿ ಮಗನನ್ನು ನೀರಿನಿಂದ ಮೇಲಕೆತ್ತಿದ್ದಾರೆ. ಆದರೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular