HomeIndiaಹೆಣ್ಣು ಅನುಭವಿಸುವ ನೋವಿಗೆ ಹೋಳಿಯ ಬಳಕೆ: ಭಾರತ್​ ಮ್ಯಾಟ್ರಿಮೋನಿಯಲ್​ ಬೈಕಾಟ್​ ಟ್ರೆಂಡ್​

ಹೆಣ್ಣು ಅನುಭವಿಸುವ ನೋವಿಗೆ ಹೋಳಿಯ ಬಳಕೆ: ಭಾರತ್​ ಮ್ಯಾಟ್ರಿಮೋನಿಯಲ್​ ಬೈಕಾಟ್​ ಟ್ರೆಂಡ್​

ಒಂದು ಹೆಣ್ಣು ಅನುಭವಿಸುವ ನೋವು ಹೊರಜಗತ್ತಿಗೆ ಕಾಣುವುದು ಅಪರೂಪ. ಹೊರಗಡೆ ನಗುವಿನ ಮುಖವಾಡ ಹೊತ್ತು ಒಳಗೆ ಅನುಭವಿಸುತ್ತಿರುವ ಹಿಂಸೆ ಆಕೆಗಷ್ಟೇ ಗೊತ್ತಿರಲು ಸಾಕು. ಹೆಣ್ಣಿನ ಸುರಕ್ಷತೆ ಮುಖ್ಯ ಎಂದು ಸಾರುವ ವಿಡಿಯೋ ಒಂದನ್ನು ಭಾರತ್​ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ರಚಿಸಿದೆ. ಅದೀಗ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಹೋಳಿಯ ಬಣ್ಣಗಳಿಂದ ಮಹಿಳೆ ಮುಖ ನೋಡಬಹುದು. ಆದರೆ ಆಕೆ ಆ ಬಣ್ಣಗಳನ್ನು ತೊಳೆದುಕೊಂಡಾಗ ದೌರ್ಜನ್ಯನಿಂದ ಜರ್ಜರಿತವಾಗಿರುವ ಆಕೆಯ ಮುಖವು ಕಾಣಿಸುತ್ತದೆ. ಹೀಗೆ ಹೆಣ್ಣುಮಕ್ಕಳಿಗೆ ಹಿಂಸೆ ಕೊಡುವುದು ಸರಿಯಲ್ಲ ಎಂಬ ಸಂದೇಶವಿದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಮಹಿಳೆಯರ ಹಿಂಸೆಗೆ ಹೋಳಿ ಹಬ್ಬವನ್ನು ತೆಗೆದುಕೊಂಡಿರುವುದು ಕೆಲವು ಹಿಂದೂ ಧರ್ಮಿಯರನ್ನು ಕೆರಳಿಸಿದೆ. ಹಿಂದೂಗಳು ಏನೂ ಹೇಳುವುದಿಲ್ಲ, ಗಲಾಟೆಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಸರಿಯಲ್ಲ ಎಂದು ಆರೋಪಿಸಿರುವ ಕೆಲವು ಹಿಂದೂಗಳು ಬೈಕಾಟ್​ ಭಾರತ್​ ಮ್ಯಾಟ್ರಿಮೋನಿ ಅಭಿಯಾನ ಶುರು ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular