HomeBeautyಗ್ಲಾಸಿ ಸ್ಕಿನ್ ನಿಮ್ಮದಾಗಬೇಕೇ? ಇಲ್ಲಿದೆ ಬೆಸ್ಟ್ 8 ರೈಸ್ ಫೇಸ್ ಮಾಸ್ಕ್‌ಗಳ ಪಟ್ಟಿ

ಗ್ಲಾಸಿ ಸ್ಕಿನ್ ನಿಮ್ಮದಾಗಬೇಕೇ? ಇಲ್ಲಿದೆ ಬೆಸ್ಟ್ 8 ರೈಸ್ ಫೇಸ್ ಮಾಸ್ಕ್‌ಗಳ ಪಟ್ಟಿ

ಆರೋಗ್ಯಕರ ಆಹಾರವಾಗಿ ಅಕ್ಕಿ ಎಷ್ಟು ಮುಖ್ಯವೋ, ಚರ್ಮದ ಅಂದ ಹೆಚ್ಚಿಸುವಲ್ಲಿಯೂ ಅದು ಅಷ್ಟೇ ಪ್ರಭಾವಶಾಲಿ. ವಿಟಮಿನ್, ಮಿನರಲ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಅಕ್ಕಿಯು ಕಪ್ಪು ಕಲೆಗಳನ್ನು ಕಡಿಮೆ ಮಾಡಲು, ಚರ್ಮದ ಬಣ್ಣವನ್ನು ಸಮತೋಲನಗೊಳಿಸಲು ಮತ್ತು ಮುಖಕ್ಕೆ ನೈಸರ್ಗಿಕ ಕಾಂತಿ ನೀಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೆರುಲಿಕ್ ಆಸಿಡ್ (Ferulic acid) ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಮನೆಯಲ್ಲೇ ಅಕ್ಕಿ ಹಿಟ್ಟಿನ ಪ್ಯಾಕ್ ಮಾಡುವುದು ಸುಲಭವಾದರೂ, ಇಂದಿನ ಓಟದ ಜೀವನದಲ್ಲಿ ಸಿದ್ಧ ಉತ್ಪನ್ನಗಳು ಹೆಚ್ಚು ಅನುಕೂಲಕರ.

ಅಂತಹ ಕೆಲವು ಅತ್ಯುತ್ತಮ ರೈಸ್ ಫೇಸ್ ಮಾಸ್ಕ್‌ಗಳ ಪಟ್ಟಿ ಇಲ್ಲಿದೆ:

1. ಐಯಾಮ್ ಫ್ರಮ್ ಕೊರಿಯಾ ರೈಸ್ ಮಾಸ್ಕ್ (I’m from Korea Rice Mask): ಇದು ಚರ್ಮದಲ್ಲಿನ ಕಲ್ಮಶ ಮತ್ತು ಸತ್ತ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಕ್ಕಿ ಪುಡಿ ಮತ್ತು ರೈಸ್ ಬ್ರಾನ್ ಹೊಂದಿರುವ ಈ ಮಾಸ್ಕ್ ಸಂಪೂರ್ಣವಾಗಿ ವೀಗನ್ ಆಗಿದ್ದು, ಸೂಕ್ಷ್ಮ ಚರ್ಮದವರಿಗೂ ಸುರಕ್ಷಿತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. COSRX ಓವರ್‌ನೈಟ್ ಸ್ಪಾ ಮಾಸ್ಕ್: ಇದು ಶೇ. 68ರಷ್ಟು ಅಕ್ಕಿ ಸಾರ ಮತ್ತು ಶೇ. 2ರಷ್ಟು ನಿಯಾಸಿನಾಮೈಡ್ (Niacinamide) ಹೊಂದಿದೆ. ರಾತ್ರಿ ಪೂರ್ತಿ ಇದನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಆಳವಾದ ಹೈಡ್ರೇಶನ್ ಸಿಗುತ್ತದೆ.

3. CLAYCO ಡಿಟಾನ್ ರೈಸ್ ಪ್ಯಾಕ್: ಬಿಸಿಲಿನಿಂದ ಆಗುವ ಟ್ಯಾನ್ ತೆಗೆಯಲು ಇದು ಪರಿಣಾಮಕಾರಿ. ಇದರಲ್ಲಿ ಸ್ಯಾಲಿಸಿಲಿಕ್ ಆಸಿಡ್ ಮತ್ತು ಗ್ಲೈಕೋಲಿಕ್ ಆಸಿಡ್ ಇದ್ದು, ಇವು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸಿ ಮೊಡವೆ ಕಲೆಗಳನ್ನು ನಿವಾರಿಸುತ್ತವೆ.

4. ಮಾಮ ಅರ್ಥ್ ರೈಸ್ ಫೇಶಿಯಲ್ ಕಿಟ್ (Mamaearth): ಕೇವಲ 30 ನಿಮಿಷಗಳಲ್ಲಿ ‘ಗ್ಲಾಸ್ ಸ್ಕಿನ್’ ಪಡೆಯಲು ಇದು ಸಹಕಾರಿ. ಅಕ್ಕಿ ನೀರು ಮತ್ತು ನಿಯಾಸಿನಾಮೈಡ್ ಮಿಶ್ರಿತ ಈ ಕಿಟ್ ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ.

5. ಥ್ಯಾಂಕ್ಯೂ ಫಾರ್ಮರ್ ರೈಸ್ ಪ್ಯೂರ್ ಕ್ಲೇ ಮಾಸ್ಕ್: ಇದು ಕ್ಲೇ ಮಾಸ್ಕ್ ಮತ್ತು ಫೋಮ್ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಜಿಡ್ಡಿನ ಚರ್ಮ (Oily skin) ಹೊಂದಿರುವವರಿಗೆ ಇದು ವರದಾನವಾಗಿದ್ದು, ರಂಧ್ರಗಳಲ್ಲಿನ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

6. ಮಿರಾಬೆಲ್ಲೆ ರೈಸ್ ವಾಟರ್ ಶೀಟ್ ಮಾಸ್ಕ್: ಚರ್ಮದ ಸ್ಥಿತಿಸ್ಥಾಪಕತ್ವವನ್ನು (Elasticity) ಹೆಚ್ಚಿಸಿ ಮುಖವನ್ನು ಬಿಗಿಗೊಳಿಸಲು ಇದು ಸಹಕಾರಿ. ಓಲಿ ಸ್ಕಿನ್‌ನವರಿಗೆ ಮೊಡವೆಗಳನ್ನು ತಡೆಯಲು ಇದು ಉತ್ತಮ ಆಯ್ಕೆ.

7. ಕೊಡಗರಿ ರೈಸ್ ಮಾಸ್ಕ್ (Kojagari): ಮೊಡವೆ, ಕಪ್ಪು ಕಲೆ ಮತ್ತು ಪಿಗ್ಮೆಂಟೇಶನ್ ಕಡಿಮೆ ಮಾಡಲು ಇದನ್ನು ಮುಖ ಹಾಗೂ ದೇಹದ ಇತರ ಭಾಗಗಳಿಗೂ ಬಳಸಬಹುದು.

8. ಗ್ಲಾಮ್‌ವೇದ ರೈಸ್ ಮತ್ತು ಸೆರಾಮೈಡ್ ಪೀಲ್-ಆಫ್ ಮಾಸ್ಕ್: ಚರ್ಮದ ನೈಸರ್ಗಿಕ ತಡೆಗೋಡೆಯನ್ನು (Skin Barrier) ಬಲಪಡಿಸಲು ಮತ್ತು ಆಳವಾದ ಪೋಷಣೆ ನೀಡಲು ಈ ಮಾಸ್ಕ್ ಸಹಾಯ ಮಾಡುತ್ತದೆ.

ಅಕ್ಕಿ ಫೇಸ್ ಮಾಸ್ಕ್ ಬಳಸುವುದರಿಂದ ಆಗುವ ಪ್ರಯೋಜನಗಳು:

  • ಬ್ರೈಟ್ನಿಂಗ್ ಎಫೆಕ್ಟ್: ನಿಯಾಸಿನಾಮೈಡ್ ಅಂಶವು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
  • ತೇವಾಂಶ: ಚರ್ಮವು ಒಣಗದಂತೆ ಹೈಡ್ರೇಟ್ ಆಗಿಡುತ್ತದೆ.
  • ವಯಸ್ಸಾಗುವಿಕೆ ತಡೆ: ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಕಡಿಮೆ ಮಾಡುತ್ತದೆ.
  • ಎಣ್ಣೆ ನಿಯಂತ್ರಣ: ಚರ್ಮದಲ್ಲಿನ ಸೆಬಮ್ ಉತ್ಪಾದನೆಯನ್ನು ಸಮತೋಲನಗೊಳಿಸುತ್ತದೆ.

ಬಳಸುವ ವಿಧಾನ: ಮುಖವನ್ನು ಚೆನ್ನಾಗಿ ತೊಳೆದ ನಂತರ ಮಾಸ್ಕ್ ಅನ್ನು ಸಮವಾಗಿ ಹಚ್ಚಿ 15-20 ನಿಮಿಷ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ 2-3 ಬಾರಿ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular