HomeLatest Newsಬೆಂಗಳೂರಿನಲ್ಲಿ ಡ್ರಗ್ಸ್ ಕೊಟ್ಟು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಅಘಾತಕಾರಿ ಅಂಶ...

ಬೆಂಗಳೂರಿನಲ್ಲಿ ಡ್ರಗ್ಸ್ ಕೊಟ್ಟು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಅಘಾತಕಾರಿ ಅಂಶ ಬಯಲು

ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳುವಂತಹ ಘಟನೆಯೊಂದು ರಾಜ್ಯ ರಾಜಧಾನಿ ಬೆಂಗಳುರಿನಲ್ಲಿ ನಡೆದಿದೆ. ಡ್ರಗ್ಸ್ ಕೊಟ್ಟು ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣದ ತನಿಖೆ ವೇಳೆ ಹಲವು ಆತಂಕಕಾರಿ ಮಾಹಿತಿ ಬಯಲಾಗಿದೆ. ಬೆಂಗಳೂರಿನ ಅಮೃತಹಳ್ಳಿ ವಿಲ್ಲಾದಲ್ಲಿ ನಡೆದ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣವು ಹಲವು ಆಘಾತಕಾರಿ ಸತ್ಯಗಳನ್ನು ಬಯಲು ಮಾಡಿದೆ. ಈ ಘಟನೆ ನಡೆದ ವಿಲ್ಲಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು ಎಂಬುದು ಪ್ರಮುಖ ವಿಷಯ. ಈ ವಿಲ್ಲಾ ದೀರ್ಘಕಾಲದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮೋಜು-ಮಸ್ತಿ, ಡ್ರಗ್ಸ್ ಸೇವನೆ ಮತ್ತು ಅನೈತಿಕ ಚಟುವಟಿಕೆಗಳ ಹಾಟ್‌ಸ್ಪಾಟ್ ಆಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದಿನ ಹಲವು ಪ್ರಕರಣಗಳಲ್ಲಿ ವಿಲ್ಲಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದರೂ ಈ ವಿಲ್ಲಾ ಐಪಿಎಸ್ ಅಧಿಕಾರಿಗೆ ಸೇರಿದ್ದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದರೂ, ಐಪಿಎಸ್ ಅಧಿಕಾರಿ ವಿರುದ್ಧ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಮೂಡಿದೆ.

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ನಿಖಿಲ್ ಮತ್ತು ಡಿಕ್ಸನ್​​ನಂತಹ ಆರೋಪಿಗಳು, ಪೊಲೀಸ್ ಅಧಿಕಾರಿಯ ವಿಲ್ಲಾ ಎಂಬುದರಿಂದ ದಾಳಿ ಮಾಡುವುದಿಲ್ಲ ಎಂಬ ಅರಿವಿನಿಂದಲೇ ಇದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆ ವಿಲ್ಲಾದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿಗಳು ಮತ್ತು ಇತರ ಐಪಿಎಸ್ ಅಧಿಕಾರಿಗಳೂ ಭೇಟಿ ನೀಡುತ್ತಿದ್ದರು ಎಂಬ ಮಾಹಿತಿ ಇದೆ. ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಲ್ಲಾ ಮಾಲೀಕರ ವಿರುದ್ಧ ಕ್ರಮ ಆಗಲಿದೆಯೇ? ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular