HomeLatest Newsಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಹತ್ಯೆಗೆ ಸ್ಫೋಟಕ ತಿರುವು: ತನಿಖೆ ವೇಳೆ ಆರೋಪಿಯ ಬೆಚ್ಚಿ ಬೀಳಿಸುವ...

ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಹತ್ಯೆಗೆ ಸ್ಫೋಟಕ ತಿರುವು: ತನಿಖೆ ವೇಳೆ ಆರೋಪಿಯ ಬೆಚ್ಚಿ ಬೀಳಿಸುವ ಕ್ರೌರ್ಯ ಬಯಲು: ಅತ್ಯಾಚಾರವೆಸಗಿ ವೈರ್ ನಿಂದ ಕತ್ತು ಬಿಗಿದು ಕೊಲೆ

ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ 6 ವರ್ಷದ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯ ವೇಳೆ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗವಾಗಿದೆ.

6 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದ ಆರೋಪಿ ಯುಸೂಫ್ ನನ್ನು ಬಂಧಿಸಿ ತನಿಖೆ ನಡೆಸಿದಾಗ ಆರೋಪಿ ಬಾಲಕಿಯನ್ನು ಅಪಹರಿಸಿ, ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿ ಬಾಲಕಿ ಕತ್ತನ್ನು ವೈರ್ ನಿಂದ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮೂಟೆಕಟ್ಟಿ ರಸ್ತೆ ಬದಿಯ ಚರಂಡಿಗೆ ಬಿಸಾಕಿದ್ದಾನೆ ಎಂದು ತಿಳಿದಿಬಂದಿದೆ.

ಪಶ್ಚಿಮ ಬಂಗಾಳ ಮೂಲದ ಯುಸೂಫ್ ವೈಟ್ ಫೀಲ್ಡ್ ಬಳಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಬಾಲಕಿ ತಂದೆ ಕೂಡ ಪಶ್ಚಿಮ ಬಂಗಾಳ ಮೂಲದವರು. ಬಾಲಕಿ ಹಾಗೂ ಆಕೆಯ-ತಂದೆ ತಾಯಿಗೂ ಯುಸೂಫ್ ಪರಿಚಯವಿದ್ದ. ಬಾಲಕಿ ತಾಯಿ ಜೊತೆ ಯುಸೂಫ್ ಜಗಳವಾಡಿದ್ದ. ಇದೇ ದ್ವೇಷಕ್ಕೆ ಆತ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರರವೆಸಗಿ ಕ್ರೌರ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಆರೋಪಿ ಯುಸೂಫ್ ಸೈಕೋಪಾಥ್ ವರ್ತನೆ ತನಿಖೆ ವೇಳೆ ಇನ್ನಷ್ಟು ಬಯಲಾಗಿದೆ. ಯುಸೂಫ್ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಎರಡು ಕೇಸ್ ಗಳು ದಾಖಲಾಗಿವೆ. ಪೋಕ್ಸೋ ಕೇಸ್ ಹಾಗೂ ಮಹಿಳೆ ಮೇಲೆ ಅತ್ಯಚಹಾರ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಯುಸೂಫ್ ಮಕ್ಕಳನ್ನೇ ಟಾರ್ಗೆಟ್ ಮಾಡಿ ದೌರ್ಜನ್ಯವೆಸಗುವಂತಹ ಮನಸ್ಥಿತಿಯುಳ್ಳವನು ಎಂಬುದು ಬಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular