ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಗೆ ನಾಯಿ ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಭದ್ರತಾ ಲೋಪದ ಬಗ್ಗೆ ವರದಿಯಾಗಿತ್ತು. ಇದೀಗ ಜಾಹಿರಾತಿನ ಬೃಹತ್ ಬಲೂನ್ ಒಂದು ರನ್ ವೇಗೆ ಹಾರಿ ಬಂದು ಬಿದ್ದಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ರನ್ ವೇಕೆ ಏಕಾಏಕಿ ಬೃಹತ್ ಬಲೂನ್ ಒಂದು ಹಾರಿ ಬಂದಿದೆ. ಈ ಸಂದರ್ಭದಲ್ಲಿ ವಿಮಾನ ಹಾರಾಟವಿರಲಿಲ್ಲವಾದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಬಿಸಿಡಿ ಕನ್ಸ್ ಸ್ಟ್ರಕ್ಷನ್ ಎಂಬ ಕಂಪನಿಗೆ ಸೇರಿದ ಬೃಹತ್ ಜಾಹೀರಾತು ಬಲೂನ್ ಇದಾಗಿದ್ದು, ದಾರಾ ಕಟ್ ಆಗಿದ್ದರಿಂದ ಗಾಳಿಯಲ್ಲಿ ಹಾರುತ್ತಾ ಬಂದು ರನ್ ವೇಗೆ ಬಂದಿದೆ. ಬಳಿಕ ಭದ್ರತಾ ಸಿಬ್ಬಂದಿಗಳು ಬಲೂನ್ ತೆರವು ಗೊಳಿಸಿದ್ದಾರೆ.
ರನ್ ವೇಗೆ ಬಲೂನ್ ಹಾರಿ ಬಂದ ಬಗ್ಗೆ ಏರ್ ಪೋರ್ಟ್ ಸಿಬ್ಬಂದಿ ಏರ್ ಪೋರ್ಟ್ ಠಾಣೆಯಲ್ಲಿ ಬಿಸಿಡಿ ಕಂಪನಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

