HomeLatest NewsBIG NEWS: ಬೆಂಗಳೂರಿನಲ್ಲಿ ಟೆಕ್ಕಿ ನಾಪತ್ತೆ: ಆತಂಕದಲ್ಲಿ ಕುಟುಂಸ್ಥರು

BIG NEWS: ಬೆಂಗಳೂರಿನಲ್ಲಿ ಟೆಕ್ಕಿ ನಾಪತ್ತೆ: ಆತಂಕದಲ್ಲಿ ಕುಟುಂಸ್ಥರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟೆಕ್ಕಿ ನಾಪತ್ತೆಯಾಗಿದ್ದು, ಪತ್ನಿ ಹಾಗೂ ಕುಟುಂಬಸ್ಥರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ವಿಪಿನ್ ಗುಪ್ತಾ (37) ನಾಪತ್ತೆಯಾಗಿರುವ ಟೆಕ್ಕಿ. ಮಾಅನ್ಯತಾ ಟೆಕ್ ಪಾರ್ಕ್ ನಲ್ಲಿರುವ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಿಪಿನ್ ಗುಪ್ತಾ, ಕಲೆದ 8 ದಿನಗಳಿಂದ ನಾಪತ್ತೆಯಾಗಿದ್ದಾರೆ.

ತನ್ನ ಕವಾಸಕಿ ಬೈಕ್ ನಲ್ಲಿ ಎಂಟು ದಿನಗಳ ಹಿಂದೆ ಮನೆಯಿಂದ ತೆರಳಿರುವ ವಿಪಿನ್ ಗುಪ್ತಾ, ಮನೆಗೆ ವಾಪಾಸ್ ಆಗಿಲ್ಲ. ಪತಿಯನ್ನು ಹುಡುಕಿಕೊಡುವಂತೆ ವಿಪಿನ್ ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಬಿಟ್ಟ ಕೆಲವೇ ಸಮಯಗಳಲ್ಲಿ ವಿಪಿನ್ ಗುಪ್ತಾ 1 ಲಕ್ಷದ 80 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಯಾರಾದರೂ ಬೆದರಿಕೆ ಹಾಕಿ ಹಣ ಡ್ರಾ ಮಾಡಿಸಿಕೊಂಡು ಕಿಡ್ನ್ಯಾಪ್ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಲಖ್ನೌ ಮೂಲದವರಾದ ವಿಪಿನ್ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಪತ್ನಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಸ್ಟ್ 4ರಂದು ಮಧ್ಯಾಹ್ನ ವಿಪಿನ್, ಪತ್ನಿಗೂ ಹೇಳದೇ ಏಕಾಏಕಿ ಕೈಯಲ್ಲಿ ಟೀ ಶರ್ಟ್ ಹಿಡಿದು, ಬೈಕ್ ನಲ್ಲಿ ಮನೆಯಿಂದ ಹೊರಟಿದ್ದಾರೆ. ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಪತ್ನಿ ಹಾಗೂ ಮಕ್ಕಳು ಕಂಗಾಲಾಗಿದ್ದು, ಪತ್ನಿಯನ್ನು ಹುಡುಕಿಕೊಡಿ ಎಂದು ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular